ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡೀ ದೇಶದಲ್ಲಿ ಓಟ್ ಚೋರಿ ಆಗಿದೆ. ಚುನಾವಣೆ ಆಯೋಗದಿಂದ ನಮಗೆ ನ್ಯಾಯ ಸಿಗಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದರು.
ಓಟ್ ಚೋರಿ ಬಗ್ಗೆ ರಾಹುಲ್ ಗಾಂಧಿ ಸುದ್ದಿಗೋಷ್ಠಿ ಸಂಬಂಧ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭೆ ಚುನಾವಣೆ ವೇಳೆ ಮೂರನೇ ಎಲೆಕ್ಷನ್ ಆಗುವ ಹೊತ್ತಿಗೆ ಬಿಜೆಪಿಯವರ ಪಾಪ್ಯುಲಾರಿಟಿ ಕಡಿಮೆ ಆಯಿತು. ಹೀಗಾಗಿ ಗೆಲ್ಲೋಕೆ ದೇಶದ ಎಲ್ಲಾ ಭಾಗದಲ್ಲಿ ಮತ ತೆಗೆಯೋ ಕೆಲಸ ಮಾಡಿದರು.
ಮಹದೇವಪುರ, ಆಳಂದ ಸೇರಿ ಹಲವು ಕಡೆ ಹೀಗೆ ಮಾಡಿದ್ದಾರೆ. ಬಿಜೆಪಿ ಅವರು ಅಧಿಕಾರ ಇರುವ ಕಡೆ ವಿಪಕ್ಷಗಳ ಕ್ಷೇತ್ರದ ಕಡೆ ಜಾಸ್ತಿ ಮಾಡಿದ್ದಾರೆ. ಇಂತಹ ಮತ ಅಕ್ರಮ ದೇಶದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಎಲೆಕ್ಷನ್ ಕಮಿಷನ್ ಕೇಂದ್ರದ ಕೈಗೊಂಬೆಯಾಗಿದೆ. ನಮಗೆ ಕಮಿಷನ್‌ನಿಂದ ನ್ಯಾಯ ಸಿಗುವ ಭರವಸೆ ಇಲ್ಲ. ಸುಪ್ರೀಂಕೋರ್ಟ್‌ಗೆ ಹೋಗಬೇಕು ಅಷ್ಟೆ ಎಂದು ತಿಳಿಸಿದರು.