Monday, November 3, 2025

ಎಲ್ಲಾ ಕಡೆ ಕ್ಯಾಮೆರಾ ಇರುತ್ತೆ, ನಿಮ್ಮ ಮನೆ ಮುಂದೆ ಕಸ ತಂದು ಹಾಕ್ತೀನಿ: ಡಿಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೇರೆ ಬೇರೆ ನಗರಗಳಲ್ಲೂ ಕಸದ ರಾಶಿ ಬಿದ್ದಿದೆ. ಎಲ್ಲಾ ಕಡೆ ಕ್ಯಾಮೆರಾ ಇರುತ್ತೆ, ದೃಶ್ಯ ನೋಡಿ ನಿಮ್ಮ ಮನೆ ಮುಂದೆ ಕಸ ತಂದು ಹಾಕ್ತೀನಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಕಸದ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳು ಇಲ್ಲಿಯದ್ದು ಮಾತ್ರ ತೋರಿಸ್ತಾರೆ. ಈಗ ಇನ್ನೂ ಹೆಚ್ಚಿನ ಕ್ಯಾಮೆರಾಗಳನ್ನ ಹಾಕಿಸ್ತೀವಿ. ಯಾರೂ ಸಹ ರಸ್ತೆಗೆ ಕಸ ಹಾಕುವಂತಿಲ್ಲ. ಎಲ್ಲಾ ಕಡೆ ಕ್ಯಾಮೆರಾಗಳು ಇರುತ್ತೆ. ದೃಶ್ಯ ನೋಡಿ ನಿಮ್ಮ ಮನೆ ಮುಂದೆ ಕಸ ತಂದು ಹಾಕ್ತೀನಿ ಅಂತ ಹೇಳಿದರು.

ನಾಗರಿಕರು ಫೋಟೋ ಪೋಸ್ಟ್ ಮಾಡಿ ಟೀಕೆ ಮಾಡ್ತಾರೆ. ನಾನು ಮುಂಬೈಗೆ ಹೋಗಿದ್ದೆ ಅಲ್ಲೂ ಕಸ ಹಾಕಿದ್ದಾರೆ. ಯಾರೂ ಕಸ ಹಾಕ್ತಾರೆ ಅವ್ರ ಮನೆ ಮುಂದೆ ವಾಪಸ್ ಕಸ ಹಾಕಿದ್ದೇವೆ. ವಾಹನಗಳಲ್ಲಿ ಕಸ ತೆಗೆದುಕೊಂಡು ಹೋಗಿ ಹಾಕ್ತಾರೆ. ಎಲ್ಲರಿಗೂ ಮನವಿ ಮಾಡ್ತೀನಿ. ಮನೆ ಬಳಿ ಕಸದ ಡಬ್ಬಿ ಇಟ್ಟುಕೊಂಡು ಕಸ ಹಾಕಿ. ನಮ್ಮ ವಾಹನ ಬರುತ್ತದೆ ಅದಕ್ಕೆ ಕೊಡಿ ಅಂತ ಸಲಹೆ ನೀಡಿದರು.

error: Content is protected !!