Monday, September 8, 2025

POWER CUT | ಬೆಂಗಳೂರಿನ ಈ ಏರಿಯಾಗಳಲ್ಲಿ ಇನ್ನೆರಡು ದಿನ ಕರೆಂಟ್‌ ಇಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಣಸವಾಡಿ 66/11 ಕೆ.ವಿ. ಉಪ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಿನ್ನಲೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಸೆಪ್ಟೆಂಬರ್ 9 ಮತ್ತು 10 ರಂದು ನಗರದ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತಗೊಳಿಸುವುದಾಗಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. 

ಬೆಸ್ಕಾಂನ ಮಾಧ್ಯಮ ಪ್ರಕಟಣೆ ಪ್ರಕಾರ, ವಿದ್ಯುತ್ ಸಂಬಂಧಿತ ತುರ್ತು ನಿರ್ವಹಣೆ, ದುರಸ್ತಿ ಕಾರ್ಯ ಮತ್ತು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇದು ತುರ್ತು ನಿರ್ವಹಣೆಯೂ ಮುಂದಿನ ದಿನಗಳಲ್ಲಿನ ಸುಗಮ ವಿದ್ಯುತ್ ಸರಬರಾಜಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದೆ.

ಎಲ್ಲೆಲ್ಲಿ ಪವರ್‌ ಕಟ್‌?

ಹೊರಮಾವು ಪಿ ಆ್ಯಂಡ್​ ಟಿ ಲೇಔಟ್, ನಿಸರ್ಗ ಕಾಲೋನಿ, ನಂದನಂ ಕಾಲೋನಿ, ಆಶೀರ್ವಾದ ಕಾಲೋನಿ, ಜ್ಯೋತಿನಗರ, ಅಗರ, ಬಾಲಾಜಿ ಲೇಔಟ್, ಚಿನ್ನಸ್ವಾಮಪ್ಪ ಲೇಔಟ್, ಕೋಕೋನಟ್​​​ ಗ್ರೋವ್​​, ದೇವಮಾತಾ ಶಾಲೆ, ಅಮರ್ ರೀಜೆನ್ಸಿ, ವಿಜಯಾ ಬ್ಯಾಂಕ್ ಕಾಲೋನಿ, ಎಚ್‌ಆರ್‌ಬಿಆರ್ ಲೇಔಟ್, ಕಮ್ಮನಹಳ್ಳಿ ಮುಖ್ಯರಸ್ತೆ, ಕಲ್ಯಾಣ ನಗರ, ಹೆಣ್ಣೂರು ಗ್ರಾಮ, ಚೇಳಿಕೆರೆ, ಮೇಘನ ಪಾಳ್ಯ.

ಗೆದ್ದಲಹಳ್ಳಿ, ಕೊತ್ತನೂರು, ವಡ್ಡರಪಾಳ್ಯ, ಜಾನಕಿರಾಮ್​ ಲೇಔಟ್, ಬಿಡಿಎಸ್ ಗಾರ್ಡನ್, ಸತ್ಯ ಎನ್ ಕ್ಲೇವ್, ಪ್ರಕೃತಿ ಬಡಾವಣೆ, ಹೊಯ್ಸಳನಗರ, ಬೃಂದಾವನ ಬಡಾವಣೆ, ವಿನಾಯಕ ಲೇಔಟ್, ವಿವೇಕಾನಂದ ಲೇಔಟ್, ಮಂಜುನಾಥ್ ನಗರ ರಸ್ತೆ, ಯಾಸಿನ್ ನಗರ, ಎನ್​​​ ಆರ್ ಐ ಲೇಔಟ್, ಪುಣ್ಯಭೂಮಿ ಲೇಔಟ್, ಸಮದ್ ಲೇಔಟ್, ಕುಳ್ಳಪ್ಪ ಸರ್ಕಲ್, ರಾಜ್ ಕುಮಾರ್ ಪಾರ್ಕ್, ಸಂಗೊಳ್ಳಿ ರಾಯಣ್ಣ ರಸ್ತೆ, ರಾಮಮೂರ್ತಿನಗರ ಮುಖ್ಯರಸ್ತೆ, ಕೃಷ್ಣಾರೆಡ್ಡಿ ಬಡಾವಣೆ.

ಚಿಕ್ಕ ಬಾಣಸವಾಡಿ, ಸುಬ್ಬಯ್ಯನಪಾಳ್ಯ, ಗ್ರೀನ್ ಪಾರ್ಕ್ ಲೇಔಟ್, ದಿವ್ಯ ಉನ್ನತಿ ಲೇಔಟ್, ಪ್ರಕೃತಿ ಟೌನ್‌ಶಿಪ್, ಬೈರತಿ, ಕ್ಯಾಲಸನಹಳ್ಳಿ, ನಕ್ಷತ್ರ ಲೇಔಟ್, ಬೈರತಿ ಬಂಡೆ, ಸಂಗಮ್ ಎನ್‌ಕ್ಲೇವ್, ಆತಂ ವಿದ್ಯಾನಗರ, ಬೈರತಿಹಳ್ಳಿ, ಕನಕಶ್ರೀ ಲೇಔಟ್, ಬಾಬುಸಪ್ಪಾ, ಸಿಎನ್ಆರ್ ಲೇಔಟ್, ಆರ್.ಎಸ್. ಪಾಳ್ಯ, ಮುನಿಕಲ್ಲಪ್ಪ ಗಾರ್ಡನ್, ಹನುಮಂತಪ್ಪ ರಸ್ತೆ, ಕಲ್ಕೆರೆ, ಮುನೇಗೌಡ ರಸ್ತೆ, ಸಮೃದ್ಧಿ ಲೇಔಟ್, ಜಯಂತಿ ನಗರ.

ಇದನ್ನೂ ಓದಿ