ಗುಡಾಣದ ಬೀಗ ಮುರಿದು ಅಡಿಕೆ ಕದ್ದೊಯ್ದ ಕಳ್ಳರು: 90 ಸಾವಿರ ರೂ. ನಷ್ಟ

ಹೊಸದಿಗಂತ ವರದಿ ಅಂಕೋಲಾ: ಗುಡಾಣದ ಬೀಗ ಮುರಿದು ಎರಡು ಕ್ವಿಂಟಲ್‌ಗೂ ಅಧಿಕ ತೂಕದ ಅಡಿಕೆ ಕಳ್ಳತನ ಮಾಡಿರುವ ಘಟನೆ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳವಳ್ಳಿಯಲ್ಲಿ ನಡೆದಿದೆ. ಹಳವಳ್ಳಿ ಪುನರ್ವಸತಿ ಕೇಂದ್ರದ ನಿವಾಸಿ ರಾಮಕೃಷ್ಣ ನರಸಿಂಹ ಹರಿಮನೆ ಅವರ ಮನೆಯ ಹಿಂಭಾಗದಲ್ಲಿರುವ ಗುಡಾಣದಲ್ಲಿ ಅಡಿಕೆ ಸಂಗ್ರಹಿಸಿಡಲಾಗಿತ್ತು. ಸೆಪ್ಟೆಂಬರ್ 14ರಿಂದ 18ರ ನಡುವಿನ ಅವಧಿಯಲ್ಲಿ ಕಳ್ಳರು ಗುಡಾಣದ ಬೀಗ ಮುರಿದು ಒಳನುಗ್ಗಿ ಅಡಿಕೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಗುಡಾಣದಲ್ಲಿದ್ದ ತಲಾ 71 ಕೆ.ಜಿ … Continue reading ಗುಡಾಣದ ಬೀಗ ಮುರಿದು ಅಡಿಕೆ ಕದ್ದೊಯ್ದ ಕಳ್ಳರು: 90 ಸಾವಿರ ರೂ. ನಷ್ಟ