October 14, 2026
Wednesday, October 14, 2026
spot_img

ಗುಡಾಣದ ಬೀಗ ಮುರಿದು ಅಡಿಕೆ ಕದ್ದೊಯ್ದ ಕಳ್ಳರು: 90 ಸಾವಿರ ರೂ. ನಷ್ಟ

ಹೊಸದಿಗಂತ ವರದಿ ಅಂಕೋಲಾ:

ಗುಡಾಣದ ಬೀಗ ಮುರಿದು ಎರಡು ಕ್ವಿಂಟಲ್‌ಗೂ ಅಧಿಕ ತೂಕದ ಅಡಿಕೆ ಕಳ್ಳತನ ಮಾಡಿರುವ ಘಟನೆ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳವಳ್ಳಿಯಲ್ಲಿ ನಡೆದಿದೆ.

ಹಳವಳ್ಳಿ ಪುನರ್ವಸತಿ ಕೇಂದ್ರದ ನಿವಾಸಿ ರಾಮಕೃಷ್ಣ ನರಸಿಂಹ ಹರಿಮನೆ ಅವರ ಮನೆಯ ಹಿಂಭಾಗದಲ್ಲಿರುವ ಗುಡಾಣದಲ್ಲಿ ಅಡಿಕೆ ಸಂಗ್ರಹಿಸಿಡಲಾಗಿತ್ತು. ಸೆಪ್ಟೆಂಬರ್ 14ರಿಂದ 18ರ ನಡುವಿನ ಅವಧಿಯಲ್ಲಿ ಕಳ್ಳರು ಗುಡಾಣದ ಬೀಗ ಮುರಿದು ಒಳನುಗ್ಗಿ ಅಡಿಕೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ:

ಗುಡಾಣದಲ್ಲಿದ್ದ ತಲಾ 71 ಕೆ.ಜಿ ತೂಕದ ಮೂರು ಅಡಿಕೆ ಚೀಲಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ ಎನ್ನಲಾಗಿದ್ದು, ಕಳವಾದ ಅಡಿಕೆಯ ಒಟ್ಟು ತೂಕ 213 ಕೆ.ಜಿ.ಯಷ್ಟಾಗಿದೆ. ಕಳವಾದ ಅಡಿಕೆಯ ಅಂದಾಜು ಮೌಲ್ಯ ಸುಮಾರು 90 ಸಾವಿರ ರೂ ಎಂದು ತಿಳಿದುಬಂದಿದೆ.

ಘಟನೆ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳತನ ನಡೆಸಿದವರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ. ಕಳ್ಳತನ ನಡೆದ ಅವಧಿ ಹಾಗೂ ಆರೋಪಿಗಳ ಸುಳಿವು ಪತ್ತೆಹಚ್ಚಲು ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆಹಾಕುತ್ತಿದ್ದಾರೆ.

Must Read