ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಂಪ್ರದಾಯಕ ಸಿಹಿ ಮೈಸೂರ್‌ಪಾಕ್ ತಿನ್ನೋ ಮುನ್ನ ಒಮ್ಮೆ ಯೋಚಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಬೇಕರಿ ಸಿಹಿಗಳಲ್ಲಿ ಆರ್ಟಿಫಿಶಿಯಲ್ ಕಲರ್ ಇದೆಯಾ ಎಂದು ಆರೋಗ್ಯ ಇಲಾಖೆ ಸರ್ವೆ ಮಾಡಿದ್ದು, ಬೇಕರಿಗಳಲ್ಲಿ ಸಿಗುವ ಮೈಸೂರು ಪಾಕ್‌ನಲ್ಲಿಯೂ ಕೃತಕ ಬಣ್ಣ ಬಳಕೆ ಮಾಡಿರುವ ಕಂಡುಬಂದಿದೆ.
ಸಿಹಿ ಜತೆ ಖಾರಾ ಮಿಕ್ಸ್ಚರ್ ಕೂಡ ಆರೋಗ್ಯಕ್ಕೆ ಡೇಂಜರ್ ಎಂದು ಆಹಾರ ಇಲಾಖೆ ತಿಳಿಸಿದೆ ಆಹಾರ ಸುರಕ್ಷತಾ ಇಲಾಖೆ ನಡೆಸಿದ ವಿಶ್ಲೇಷಣೆಯಲ್ಲಿ ಈ ವಿಚಾರ ಬಹಿರಂಗವಾಗಿದೆ. ಸಿಹಿ ತಿನಿಸುಗಳಲ್ಲಿ ಇನ್ನೂ ಕೃತಕ ಬಣ್ಣ ಬಳಕೆ ಮಾಡಲಾಗುತ್ತಿದೆ. ಕಬಾಬ್ ಆಯ್ತು, ಈಗ ಸಿಹಿ ಮತ್ತು ಖಾರಾ ತಿಂಡಿಗಳಿಗೂ ಕೃತಕ ಬಣ್ಣ ಬಳಕೆ ದೃಢವಾಗಿದೆ.
ಕೆಲ ಸಿಹಿ ತಿಂಡಿಗಳಿಗೆ ಆಹಾರ ಇಲಾಖೆ ನಿಷೇಧಿಸಿರುವ ಕೃತಕ ಬಣ್ಣ ಬಳಕೆ ಮಾಡಿರೋದು ಬೆಳಕಿಗೆ ಬಂದಿದೆ. ಆಹಾರ ಇಲಾಖೆ ನಡೆಸಿದ ಅಭಿಯಾನದಲ್ಲಿ ಸಂಗ್ರಹಿಸಿದ್ದ ಸ್ಯಾಂಪಲ್ಸ್ ನಲ್ಲಿ ಇದು ಪತ್ತೆಯಾಗಿದೆ. ವಿವಿಧ ಆಹಾರ ತಿನಿಸುಗಳ ಸಾವಿರಾರು ಮಾದರಿಗಳನ್ನ ಆಹಾರ ಇಲಾಖೆ ಸಂಗ್ರಹಿಸಿದೆ. ಸಂಗ್ರಹಿಸಿದ ಸಿಹಿ ಮತ್ತು ಖಾರಾ ಪದಾರ್ಥಗಳನ್ನು ಲ್ಯಾಬ್ ಕಳುಹಿಸಲಾಗಿದೆ. ಇದರ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ.
ಮೈಸೂರು ಪಾಕ್ ತಿನ್ನೋ ಮುನ್ನ ಯೋಚಿಸಿ : ಆಹಾರ ಇಲಾಖೆ ಸರ್ವೆಲಿ ಏನಿದೆ?
