Saturday, September 27, 2025

ಏನೇನೋ ಟೈಪ್‌ ಮಾಡೋ ಮುನ್ನ ಥಿಂಕ್‌ ಮಾಡಿ! ಬಿಗ್‌ಬಾಸ್‌ಗೆ ಬಾಂಬ್‌??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಬಿಗ್ ಬಾಸ್ ಸ್ಪರ್ಧಿಗಳಾಗುವ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದೆ.

ಹೌದು.. ಬಿಗ್ ಬಾಸ್ ಕನ್ನಡ ಸೀಸನ್ -12 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಸಂಜೆ ಅಂದರೆ ಭಾನುವಾರ ಸಂಜೆಯಿಂದ ಈ ರಿಯಾಲಿಟಿ ಶೋ ಆರಭವಾಗುತ್ತಿದೆ. ಸ್ಪರ್ಧಿಗಳು ಯಾರು, ಯಾವ ರೂಪದಲ್ಲಿ ಈ ಬಿಗ್ ಬಾಸ್ ಇರುತ್ತದೆ. ಟ್ವಿಸ್ಟ್ ಏನು? ಹೀಗೆ ವೀಕ್ಷಕರ ಮನಸ್ಸಿನಲ್ಲಿ ಬಿಗ್ ಬಾಸ್ – 12 ಬಗ್ಗೆ ಹಲವು ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈ ನಡುವೆ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿಯಾಗುವ ಆಕಾಂಕ್ಷಿಗಳ ಪಟ್ಟಿಯೇ ದೊಡ್ಡದಿದ್ದು, ಪ್ರಮುಖವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಇನ್ ಫ್ಲುಯೆನ್ಸರ್ ಗಳ ಹೆಸರುಗಳು ಹೆಚ್ಚಾಗಿ ಕೇಳಿಬರುತ್ತಿವೆ. ಈ ನಡುವೆ ಇಂತಹುದೇ ಇನ್ ಫ್ಲುಯೆನ್ಸರ್ ಓರ್ವ ಬಿಗ್ ಬಾಸ್ ಸ್ಪರ್ಧಿಯಾಗಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

mummy_ashok16 ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದ್ದ ವಿಡಿಯೋದಲ್ಲಿ ಬಂಧಿತ ವ್ಯಕ್ತಿ ಕನ್ನಡ ಬಿಗ್ ಬಾಸ್ ಶೋನಲ್ಲಿ ತಮಗೆ ಅವಕಾಶ ನೀಡದೇ ಇದ್ದರೆ ಬಿಗ್ ಬಾಸ್ ಗೇ ಬಾಂಬ್ ಹಾಕ್ತೀನಿ ಎಂದು ವಿಡಿಯೋ ಮಾಡಿದ್ದ.

ಇದೇ ವಿಡಿಯೋವನ್ನು ಸಾಕ್ಷ್ಯವನ್ನಾಗಿ ಪರಿಗಣಿಸಿ ಕುಂಬಳಗೂಡು ಪೊಲೀಸ್ ಠಾಣೆಯ ಸಾಮಾಜಿಕ ಜಾಲತಾಣ ನಿರ್ವಹಣಾ ವಿಭಾಗದ ಪಿಸಿ 20193 ವರದಿ ನೀಡಿದ್ದರು. ಈ ವರದಿಯನ್ನಾಧರಿಸಿ ಪೊಲೀಸರು ಇದೀಗ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.