Wednesday, November 5, 2025

CINE |ಇದು ನನ್ನ ಸ್ಪೆಷಲ್‌ ರಿಂಗ್‌: ನಾಚಿ ನೀರಾದ ರಶ್ಮಿಕಾ ಮಂದಣ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್‌ ದೇವರಕೊಂಡ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಸುದ್ದಿ ಹೊರಬಿದ್ದ ನಂತರವೇ ಇಬ್ಬರ ಕೈಯಲ್ಲೂ ಮಿನುಗುವ ಉಂಗುರ ಕಾಣಿಸಿದೆ.

ಆದರೆ ಇದನ್ನು ಅವರು ಒಪ್ಪಿಕೊಂಡಿಲ್ಲ. ಈಗ ಅವರು ಜೀ ತೆಲುಗಿನ ಕಾರ್ಯಕ್ರಮ ಒಂದಕ್ಕೆ ಬಂದಿದ್ದಾರೆ. ಈ ಶೋನ ನಡೆಸಿಕೊಟ್ಟಿದ್ದು ಜಗಪತಿ ಬಾಬು.

ಹಲವು ವಿಚಾರಗಳ ಬಗ್ಗೆ ಇಲ್ಲಿ ಚರ್ಚೆಗಳು ನಡೆದವು. ಇದೇ ವೇಳೆ ಕೈಯಲ್ಲಿರುವ ಉಂಗುರದ ಬಗ್ಗೆ ಅವರಿಗೆ ಕೇಳಲಾಯಿತು ಮತ್ತು ಅವರು ಉಂಗುರ ವಿಶೇಷ ಎಂದಷ್ಟೇ ಹೇಳಿದರು. ಈ ವೇಳೆ ರಶ್ಮಿಕಾ ನಾಚಿ ನೀರಾಗಿದ್ದಾರೆ. ಇದು ಅವರ ಎಂಗೇಜ್​ಮೆಂಟ್ ರಿಂಗ್ ಎಂದು ಹೇಳಲಾಗುತ್ತಿದೆ.

error: Content is protected !!