Tuesday, September 16, 2025

FOOD | 15 ನಿಮಿಷಗಳಲ್ಲಿ ತಯಾರಾಗುತ್ತೆ ಈ ಸ್ಪೆಷಲ್‌ ಚಟ್ನಿ

  • ಎಣ್ಣೆ – 2 ಟೀಸ್ಪೂನ್
  • ಮೆಂತ್ಯೆ – 1 ಟೀಸ್ಪೂನ್
  • ಸಾಸಿವೆ – 1 ಟೀಸ್ಪೂನ್
  • ಜೀರಿಗೆ – ಅರ್ಧ ಟೀಸ್ಪೂನ್
  • ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್
  • ಒಣ ಮೆಣಸಿನಕಾಯಿ – 20
    • ಹುಣಸೆಹಣ್ಣು – ದೊಡ್ಡ ನಿಂಬೆ ಗಾತ್ರದಷ್ಟು
  • ಬೆಳ್ಳುಳ್ಳಿ – 8 ಎಸಳು
  • ಉಪ್ಪು – ರುಚಿಗೆ ತಕ್ಕಷ್ಟು

  • ಮೊದಲಿಗೆ ಒಲೆಯ ಮೇಲೆ ಕಡಾಯಿ ಇಡಿ. ಎಣ್ಣೆ ಹಾಕಿ, ಅದು ಬಿಸಿಯಾದಾಗ ಮೆಂತ್ಯ, ಸಾಸಿವೆ, ಜೀರಿಗೆ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಕಡಿಮೆ ಉರಿಯಲ್ಲಿ ಹುರಿಯಿರಿ. ಬಳಿಕ ಒಣ ಮೆಣಸಿನಕಾಯಿಗಳನ್ನು ಸೇರಿಸಿ ಹುರಿಯಿರಿ.
  • ಈಗ ಎಲ್ಲಾ ಪದಾರ್ಥಗಳನ್ನು ಮೂರು ನಿಮಿಷಗಳ ಕಾಲ ಹುರಿಯಿರಿ. ಬಳಿಕ ಒಲೆ ಆಫ್ ಮಾಡಿ ಮತ್ತು ಹುಣಸೆಹಣ್ಣು ಸೇರಿಸಿ ಮತ್ತು ಅದು ತಣ್ಣಗಾದ ಬಳಿಕ ಮಿಶ್ರಣ ಮಾಡಿ.
  • ಹುರಿದ ಪದಾರ್ಥಗಳೊಂದಿಗೆ ಬೆಳ್ಳುಳ್ಳಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
  • ನಂತರ ಇದಕ್ಕೆ ಹಿಂಗ್‌ನ ಒಗ್ಗರಣೆ ಕೊಟ್ಟುಕೊಂಡು ಬಿಸಿ ಬಿಸಿ ತಿನ್ನಿ

ಇದನ್ನೂ ಓದಿ