ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೃಷಿ ಯಾಂತ್ರಿಕತೆ ಹಾಗೂ ವೈಜ್ಞಾನಿಕ ಪದ್ಧತಿಗಳ ಪರಿಚಯ, ಸಮಗ್ರ ಕೃಷಿ ಹಾಗೂ ಉಪ ಕಸುಬುಗಳಿಗೆ ಉತ್ತೇಜನ ನೀಡುವ ಆಶಯದೊಂದಿಗೆ ಈ ಬಾರಿಯ ‘ರೈತ ದಸರಾ’ ನಡೆಸಲು ಸಮಿತಿ ನಿರ್ಧರಿಸಿದೆ.
ಜೆ.ಕೆ.ಮೈದಾನದಲ್ಲಿದಸರಾ ಮಹೋತ್ಸವದ ಅಂಗವಾಗಿ ಸೆ. 26ರಿಂದ 28ರವರೆಗೆ ರೈತ ದಸರಾ ಆಯೋಜಿಸಲಾಗಿದೆ. ದೇಶದ ಆರ್ಥಿಕತೆಯ ಬೆನ್ನೆಲುಬಾದ ಅನ್ನದಾತರನ್ನೂ ದಸರಾ ಒಳಗೊಳ್ಳಬೇಕೆಂಬ ಉದ್ದೇಶದಿಂದ ಪ್ರತಿವರ್ಷವೂ ‘ರೈತ ದಸರಾ’ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಕೃಷಿ ತಾಂತ್ರಿಕತೆಯ ಅನಾವರಣಕ್ಕೆ ಉಪ ಸಮಿತಿ ಸಿದ್ಧತೆ ನಡೆಸಿದೆ. ರೈತರಿಗೆ ಅನುಕೂಲವಾಗುವ ಹಾಗೂ ಅಗತ್ಯ ಮಾಹಿತಿ ನೀಡಲು ನಾನಾ ಕಾರ್ಯಕ್ರಮ ರೂಪಿಸಲಾಗಿದೆ.
ಸೆ. 26ರಂದು ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ರೈತ ದಸರಾ ಮೆರವಣಿಗೆಗೆ ಚಾಲನೆ ಸಿಗಲಿದೆ. ಸುಧಾರಿತ ಹೈಟೆಕ್ ಯಂತ್ರೋಪಕರಣ, ಬಂಡೂರು ಕುರಿ, ಹಳ್ಳಿಕಾರ್ ಜಾನುವಾರು, ಕೃಷಿ ಪರಿಕರಗಳ ಮೆರವಣಿಗೆ ನಡೆಯಲಿದೆ. ರೈತ ದಸರಾ ಬಿಂಬಿಸುವ ಬ್ಯಾನರ್‌ಗಳು, ನಾದಸ್ವರ, ಅಲಂಕೃತಗೊಂಡ ಎತ್ತಿನ ಗಾಡಿಗಳು, ಪೂಜಾ ಕುಣಿತ, ನಗಾರಿ ಸೇರಿದಂತೆ ನಾನಾ ಕಲಾ ತಂಡಗಳು ಭಾಗಿಯಾಗುತ್ತವೆ.
ಸೆ. 27ರಂದು ರಾಜ್ಯ ಹಾಲು ಕರೆಯುವ ಸ್ಪರ್ಧೆ ನಡೆಯಲಿದ್ದು, ಬೆಳಗ್ಗೆ ಮತ್ತು ಸಂಜೆ ಒಂದು ಹಸು ಎಷ್ಟು ಹಾಲು ಕೊಡುತ್ತದೆ ಎನ್ನುವುದನ್ನು ಆಧರಿಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ. ಹೆಚ್ಚು ಹಾಲು ಕರೆದ ಹಸುವಿನ ಮಾಲೀಕರಿಗೆ ಅಂದು ಸಂಜೆ ಬಹುಮಾನ ನೀಡಲಾಗುತ್ತದೆ.
ಈ ಬಾರಿ ಅನ್ನದಾತರ ದಸರಾ ಆಚರಣೆ, ಯಾವಾಗಿನಿಂದ ಆರಂಭ?
