ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದವರು ಸನಾತನವಾದಿಗಳು, ಮನುವಾದಿಗಳು ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಶೂ ಎಸೆದ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿಗಳಾದ ಗವಾಯಿ ಅವರೇ ಕ್ಷಮಿಸಿದ್ದಾರೆ. ಶೂ ಎಸೆಯೋ ಮನಸ್ಥಿತಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಇದು ಮನುವಾದಿಗಳ ಪ್ರಯತ್ನ ಎಂದು ಕಿಡಿಕಾರಿದ್ದಾರೆ.
ಸಿಜೆ ಅವರು ಶೂ ಎಸೆತಕ್ಕೆ ವಿಚಲಿತ ಆಗಿಲ್ಲ. ಅವರ ಕೆಲಸ ಅವರು ಮಾಡಿದ್ದಾರೆ. ಅವರು ಕ್ಷಮಿಸಿದ್ದಾರೆ. ಅದು ಅವರ ದೊಡ್ಡ ಗುಣ. ಇದು ಸನಾತನವಾದಿಗಳು, ಮನುವಾದಿಗಳ ಕೆಲಸ ಅಂತ ವಾಗ್ದಾಳಿ ನಡೆಸಿದರು.