ನನ್ನ ರಾಜೀನಾಮೆಯ ಹಿಂದೆ ಮೂವರು ದೆಹಲಿಯಲ್ಲಿ ಕುಳಿತು ಪಿತೂರಿ: ಶಾಸಕ ಎನ್ ರಾಜಣ್ಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನನ್ನ ರಾಜೀನಾಮೆಯ ಹಿಂದೆ ಮೂವರು ದೆಹಲಿಯಲ್ಲಿ ಕುಳಿತು ಪಿತೂರಿ ನಡೆಸಿದ್ದಾರೆ ಎಂದು ಶಾಸಕ ಎನ್ ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಶಾಸಕ ಎನ್ ರಾಜಣ್ಣ ಹೇಳಿಕೆ ನೀಡಿದ್ದು, ನನ್ನ ಸಚಿವ ಸ್ಥಾನ ತೆಗೆಯುವುದು ಮುಖ್ಯಮಂತ್ರಿಗೆ ಗೊತ್ತಿರಲಿಲ್ಲ. ಮೂವರು ದೆಹಲಿಯಲ್ಲಿ ವ್ಯವಸ್ಥಿತ ಪಿತೂರಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಮನವೊಲಿಸಲು ಯತ್ನಿಸಿದ್ದಾರೆ ಆದರೆ ಅದು ಆಗಿಲ್ಲ. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಇದ್ದಾಗ ರಾಹುಲ್ ಗಾಂಧಿಯವರು ಕರೆ ಮಾಡಿದ್ದರು . ಕಾರಣ ಏನಿದೆ ಅಂತ ನನಗೆ ಗೊತ್ತಿಲ್ಲ. ಯಾವುದೇ ಸ್ಟೇಟ್ಮೆಂಟ್ ಅಂತಲ್ಲ ಸತ್ಯವನ್ನೇ ನಾನು ಹೇಳಿದ್ದೇನೆ ಎಂದರು.

ಇನ್ನೊಂದು 20 ಸೀಟು ಬಂದಿದೆ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಿದ್ದರು. ಆಗ ನರೇಂದ್ರ ಮೋದಿ ದಿನ ನಡೆಯಲ್ಲ ರಾಜಕಾರಣದಲ್ಲಿ ಏಳು ಬೀಳು ಹೊಸದಲ್ಲ ಸೋಲು ಗೆಲುವನ್ನು ಒಂದೇ ರೀತಿ ಸ್ವೀಕಾರ ಮಾಡುತ್ತೇನೆ ನಾನು ಯಾವತ್ತೂ ಸ್ವಾರ್ಥಕೋಸ್ಕರ ಸುಳ್ಳು ಹೇಳಿಲ್ಲ. ಬೇರೆಯವರ ಅನುಕೂಲಕ್ಕಾಗಿ ಸುಳ್ಳು ಹೇಳುತ್ತೇನೆ ನಿಮಗೆ ಅಧಿಕಾರ ಇಲ್ಲದಿದ್ದರೂ ಪರವಾಗಿಲ್ಲ ಜನರ ಪ್ರೀತಿ ಉಳಿಸಿಕೊಂಡಿರುವ ಶಕ್ತಿ ದೇವರು ಕೊಡಲಿ ಸಮಯ ಬಂದಾಗ ಸಚಿವ ಸ್ಥಾನವನ್ನು ಪಡೆದುಕೊಳ್ಳುತ್ತೇನೆ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!