Thursday, January 1, 2026

CINE | ಬುಕ್ಕಿಂಗ್ ಶುರುವಾಗಿದ್ದೇ ತಡ ಟಿಕೆಟ್‌ ಸೋಲ್ಡ್‌ ಔಟ್‌: ಜೋರಾಗಿದೆ ‘ಡೆವಿಲ್’ ಹವಾ! ಫ್ಯಾನ್ಸ್ ಅಂದ್ರೆ ಹೀಗಿರ್ಬೇಕು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಡೆವಿಲ್’ ಬಿಡುಗಡೆಗೆ ಕೆಲವೇ ದಿನ ಬಾಕಿ ಇರೋವಾಗ್ಲೇ ಅಭಿಮಾನಿಗಳಲ್ಲಿ ಕುತೂಹಲ ಕಮ್ಮಿಯಾಗಿಲ್ಲ. ಇನ್ನೂ ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ‘ಡೆವಿಲ್’ ಅಬ್ಬರ ಶುರುವಾಗಲಿದ್ದು, ಅದಕ್ಕೂ ಮುನ್ನವೇ ಫ್ಯಾನ್ಸ್ ಕ್ರೇಜ್ ದಾಖಲೆ ಬರೆದಿದೆ. ಡಿಸೆಂಬರ್ 11ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗಲಿದ್ದು, ಫ್ಯಾನ್ಸ್ ಶೋಗಳಿಗಾಗಿ ತೆರೆಯಲಾದ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಆರಂಭವಾದ ಕೆಲ ನಿಮಿಷಗಳಲ್ಲೇ ಹೌಸ್‌ಫುಲ್ ಆಗಿರುವುದು ಗಮನ ಸೆಳೆದಿದೆ.

ಮಧ್ಯಾಹ್ನ ಆನ್‌ಲೈನ್ ಬುಕ್ಕಿಂಗ್ ಓಪನ್ ಆದ ತಕ್ಷಣವೇ ಮೂರು ಫ್ಯಾನ್ಸ್ ಶೋಗಳ ಟಿಕೆಟ್‌ಗಳು ಮೂರೇ ನಿಮಿಷಗಳಲ್ಲಿ ಮಾರಾಟವಾಗಿದೆ. ಹೊಸ ಲುಕ್ ಮತ್ತು ಡಿಫರೆಂಟ್ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಉತ್ಸಾಹಕ್ಕೆ ಮತ್ತಷ್ಟು ಮೆರುಗು ತುಂಬಿದೆ. ಬೆಂಗಳೂರಿನಲ್ಲಿ ಮಾತ್ರವೇ 20ಕ್ಕೂ ಹೆಚ್ಚು ಫ್ಯಾನ್ಸ್ ಶೋಗಳನ್ನು ಆಯೋಜಿಸಲಾಗಿದ್ದು, ಗುರುವಾರ ಬೆಳಗ್ಗೆ ಮೊದಲ ಶೋ ಆರಂಭವಾಗಲಿದೆ.

error: Content is protected !!