ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜ್ಯದ ಅತ್ಯಂತ ಶ್ರೀಮಂತ ದೇವಾಲಯಗಳ ಪಟ್ಟಿಯನ್ನು ರಾಜ್ಯ ಸರಕಾರದ ಮುಜರಾಯಿ ಇಲಾಖೆ ಬಿಡುಗಡೆಗೊಳಿಸಿದೆ. 2024-25ನೇ ಸಾಲಿನ ಆದಾಯದ ಆಧಾರದಲ್ಲಿ ರೂಪಿಸಿದ ಈ ಪಟ್ಟಿಯಲ್ಲಿ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಅಗ್ರಸ್ಥಾನ ಪಡೆದಿದೆ.
2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ 155.95 ಕೋಟಿ ರೂ ಆದಾಯ ಗಳಿಸುವ ಮೂಲಕ ಸತತ 14ನೇ ವರ್ಷ ಆದಾಯದಲ್ಲಿ ರಾಜ್ಯದ ನಂಬರ್ ದೇವಳವಾಗಿ ಮುಂದುವರೆದಿದೆ.
ಕಳೆದ 13 ವರ್ಷಗಳಿಂದ ನಿರಂತರವಾಗಿ ಆದಾಯ ಗಳಿಕೆಯಲ್ಲಿ ರಾಜ್ಯದ ನಂಬರ್ ದೇವಸ್ಥಾನವಾಗಿ ಹೊರ ಹೊಮ್ಮಿರುವ ಕುಕ್ಕೆಯು ಈ ಬಾರಿ 155.95 ಕೋಟಿ ರೂ ಆದಾಯ ಗಳಿಸುವ ಮೂಲಕ ಸತತ 14ನೇ ವರ್ಷವೂ ಆದಾಯ ಗಳಿಕೆಯಲ್ಲಿ ನಂಬರ್ ವನ್ ಸ್ಥಾನವನ್ನು ಮತ್ತೆ ಗಟ್ಟಿಗೊಳಿಸಿದೆ.
ಮುಜರಾಯಿ ಇಲಾಖೆಯ ಮಾಹಿತಿ ಪ್ರಕಾರ ,ಎರಡನೇ ಸ್ಥಾನದಲ್ಲಿ ಕೊಲ್ಲೂರು ಮುಕಾಂಬಿಕಾ ದೇವಳ 71.93 ಕೋಟಿ ರೂ, ಮೂರನೇ ಸ್ಥಾನದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟ 50.68 ಕೋಟಿ ರೂ, 4ನೇ ಸ್ಥಾನದಲ್ಲಿ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ 36.12 ಕೋ.ರೂ, 5ನೇ ಸ್ಥಾನದಲ್ಲಿ ಸವದತ್ತಿ ರೇಣುಕಾ ಯಲ್ಲಮ್ಮ 29.95 ಕೋ ರೂ,6ನೇ ಸ್ಥಾನದಲ್ಲಿ ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನ 29.82 ಕೋಟಿ ರೂ, 7ನೇ ಸ್ಥಾನದಲ್ಲಿ ಹುಲಿಗಿಯ ಹುಲಿಗೆಮ್ಮ ದೇವಸ್ಥಾನ 17.30 ಕೋ.ರೂ,8ನೇ ಸ್ಥಾನದಲ್ಲಿ ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ 16.54 ಕೋ.ರೂ, 9ನೇ ಸ್ಥಾನದಲ್ಲಿ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ 13.73 ಕೋಟಿ ರೂ,10ನೇ ಸ್ಥಾನದಲ್ಲಿ ಬೆಂಗಳೂರಿನ ಬನಶಂಕರಿ ದೇವಸ್ಥಾನ 11.38 ಕೋ.ರೂ ಆದಾಯ ಗಳಿಸಿದೆ.

