Thursday, October 23, 2025

ಪ್ರಭಾಸ್ ಅಭಿನಯದ ಪ್ಯಾನ್-ಇಂಡಿಯಾ ಚಿತ್ರ ‘ದಿ ರಾಜಾಸಾಬ್’ ಟ್ರೈಲರ್ ರಿಲೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಪ್ಯಾನ್-ಇಂಡಿಯಾ ಚಿತ್ರ ‘ದಿ ರಾಜಾಸಾಬ್’ ಟ್ರೈಲರ್ ಬಿಡುಗಡೆಯಾಗಿದೆ.

ಇಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಪ್ರಭಾಸ್‌ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಮಾರುತಿ ಹಾರರ್‌ ಕಾಮಿಡಿ ಶೈಲಿಯ ಈ ಸಿನಿಮಾದಲ್ಲಿ, ಹೃದಯಸ್ಪರ್ಶಿ ಭಾವನೆಗಳನ್ನೂ ಬೆರೆಸಿದ್ದಾರೆ .

ಭಾರತದ ಅತಿದೊಡ್ಡ ಹಾರರ್ ಫ್ಯಾಂಟಸಿ ಡ್ರಾಮಾ ಎಂದು ಬಿಂಬಿಸಲಾಗಿರುವ ‘ದಿ ರಾಜಾಸಾಬ್’, ಮೇಕಿಂಗ್‌, ದೊಡ್ಡ ಕ್ಯಾನ್ವಾಸ್‌ ಮೂಲಕವೇ ಎಲ್ಲರನ್ನು ನಿಬ್ಬೆರಗಾಗಿಸಿದೆ. ನೋಡುಗರನ್ನು ಭಯಕ್ಕೆ ಕೆಡವುದರ ಜತೆಗೆ ಆ ದೃಶ್ಯ ವೈಭವವನ್ನು ಮೀರಿ, ಪ್ರೀತಿ, ಕುಟುಂಬ ಮತ್ತು ಪೂರ್ವಜರ ಪರಂಪರೆಯ ವಿಷಯಗಳನ್ನು ಈ ಸಿನಿಮಾದಲ್ಲಿ ಹೇಳಿದ್ದಾರೆ ನಿರ್ದೇಶಕರು.

https://www.youtube.com/watch?v=i-8w5yDwukA

ಸಿನಿಮಾ ಬಿಡುಗಡೆಗೆ ಸುಮಾರು ಮೂರು ತಿಂಗಳ ಮುಂಚೆಯೇ 3 ನಿಮಿಷಗಳಿಗಿಂತ ಹೆಚ್ಚಿನ ಅವಧಿಯ ಟ್ರೇಲರ್‌ ಅನ್ನು ಬಿಡುಗಡೆ ಮಾಡುವ ಮೂಲಕ ನಿರ್ಮಾಪಕರು ಚಿತ್ರದ ಭವ್ಯತೆಯ ಬಗ್ಗೆ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಟ್ರೈಲರ್ ಬಿಡುಗಡೆಯನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದ 105 ಚಿತ್ರಮಂದಿರಗಳಲ್ಲಿ ಸಾಮೂಹಿಕ ಪ್ರದರ್ಶನಗಳೊಂದಿಗೆ ಸೆಲೆಬ್ರೇಟ್‌ ಮಾಡಲಾಯಿತು. ಅಭಿಮಾನಿಗಳು ಹರ್ಷೋದ್ಗಾರ ಮತ್ತು ಶಿಳ್ಳೆಗಳ ನಡುವೆ ಟ್ರೈಲರ್ ಅನಾವರಣವಾಯಿತು. ಟ್ರೈಲರ್ ಏಕಕಾಲದಲ್ಲಿ ಪೀಪಲ್ ಮೀಡಿಯಾ ಫ್ಯಾಕ್ಟರಿಯ ಡಿಜಿಟಲ್ ವೇದಿಕೆಗಳಲ್ಲಿ ಬಿಡುಗಡೆಯಾಗಿ, ವಿಶ್ವಾದ್ಯಂತ ಅಭಿಮಾನಿಗಳಿಗೆ ಉತ್ಸಾಹಕ್ಕೆ ಒಗ್ಗರಣೆ ಹಾಕಿದೆ.

‘ದಿ ರಾಜಾಸಾಬ್’ ಟ್ರೈಲರ್ ಬಿಡುಗಡೆಯ ಬಗ್ಗೆ ಮಾತನಾಡಿರುವ ನಿರ್ದೇಶಕ ಮಾರುತಿ, ʼದಿ ರಾಜಾಸಾಬ್‌ʼ ಚಿತ್ರದೊಂದಿಗೆ, ನಾವು ಪ್ರತಿ ಅರ್ಥದಲ್ಲಿಯೂ ಭವ್ಯವಾದ, ಭಾವನಾತ್ಮಕವಾದ ಮತ್ತು ಮನರಂಜನೆಯ ಪ್ರಪಂಚವನ್ನು ಸೃಷ್ಟಿಸಲು ಬಯಸಿದ್ದೇವೆ. ಟ್ರೈಲರ್ ಕೇವಲ ಸಣ್ಣ ಝಲಕ್‌ ಮಾತ್ರ. ಪ್ರಭಾಸ್ ಈ ಪಾತ್ರಕ್ಕೆ ಸಾಟಿಯಿಲ್ಲದ ಶಕ್ತಿಯಾಗಿದ್ದಾರೆ ಎಂದಿದ್ದಾರೆ.

error: Content is protected !!