ಎಣ್ಣೆ -2 ಚಮಚ
ಸಾಸಿವೆ- ಸ್ವಲ್ಪ
ಉದ್ದಿನ ಬೇಳೆ -1 ಚಮಚ
ಕಡಲೆಬೇಳೆ- 1 ಚಮಚ
ಹಿಂಗು-1/4 ಚಮಚ
ಕರಿಬೇವು -10-12 ಎಲೆ
ಈರುಳ್ಳಿ – ಒಂದು
ಹಸಿಮೆಣಸಿನ ಕಾಯಿ ಅಥವಾ ಖಾರದಪುಡಿ- 3 (ಅರ್ಧ ಚಮಚ)
ಬೆಂಡೆಕಾಯಿ -250 ಗ್ರಾಂ
ಉಪ್ಪು – ಒಂದು ಚಮಚ
ಕಾಳು ಮೆಣಸಿನ ಪುಡಿ -2 ಚಮಚ
ತೆಂಗಿನ ತುರಿ -2 ಚಮಚ
ಒಂದು ಪ್ಯಾನ್ ಗೆ ಎಣ್ಣೆ, ಸಾಸಿವೆ, ಇಂಗು, ಕಡಲೆಬೇಳೆ-ಉದ್ದಿನ ಬೇಳೆ, ಕರಿಬೇವು ಹಾಗೂ ಹಿಂಗು ಹಾಕಿ 2-3 ನಿಮಿಷ ಹುರಿದುಕೊಳ್ಳಿ.
ಬಳಿಕ ಈರುಳ್ಳಿ ಹಾಕಿ. ಹಸಿಮೆಣಸಿನ ಕಾಯಿ. ಈರುಳ್ಳಿ ಕೆಂಪಗಾದ ಬಳಿಕ ಬೆಂಡೆಕಾಯಿ ಹುರಿದುಕೊಳ್ಳಿ. ನಂತರ ಉಪ್ಪು, ಕಾಳು ಮೆಣಸಿನ ಪುಡಿ, ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ತೆಂಗಿನ ತುರಿ ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಬೆಂಡೆಕಾಯಿ ಪೆಪ್ಪರ್ ಫ್ರೈ ಸವಿಯಲು ಸಿದ್ಧ.