Tuesday, September 30, 2025

ಕಿರುತೆರೆ ನಟಿಯ ಭಾವಿ ಪತಿ ಆತ್ಮಹತ್ಯೆ: ಸೆಲ್ಫಿ ವಿಡಿಯೋದಲ್ಲಿ ಕಾರಣ ಬಹಿರಂಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿವಿ ಸೀರಿಯಲ್‌, ಸಿನಿಮಾ ನಟಿ ಸೋಹಾನಿ ಕುಮಾರಿ ಅವರ ನಿಶ್ಚಿತ ವರ ಸವಾಯಿ ಸಿಂಗ್ ಜುಬಿಲಿ ಹಿಲ್‌ನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ನಡೆದ ದಿನ ಸವಾಯಿ ಸಿಂಗ್ ಬೆಳಿಗ್ಗೆ 11 ಗಂಟೆಗೆ ಕಚೇರಿಗೆ ತೆರಳಿದ್ದರು, ನಂತರ ಸೋಹಾನಿ ಹೊರಗೆ ಹೋಗಿದ್ದರು. ಫ್ಲಾಟ್‌ಗೆ ಹಿಂತಿರುಗಿ ನೋಡಿದಾಗ, ಅವರು ನೇಣು ಬಿಗಿದುಕೊಂಡಿರುವುದನ್ನು ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸವಾಯಿ ಸಿಂಗ್‌ ಸೆಲ್ಫಿ ವಿಡಿಯೋ ಕೂಡ ರೆಕಾರ್ಡ್‌ ಮಾಡಿದ್ದಾರೆ. ಇದರಲ್ಲಿ ಆತ ನಾನು ಈ ಹಿಂದೆ ಸಾಕಷ್ಟು ತಪ್ಪುಗಳನ್ನು ಮಾಡಿದ್ದೇನೆ. ಆ ತಪ್ಪುಗಳು ನನಗೆ ಈಗಲೂ ಸಮಸ್ಯೆ ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ

ರಾಜಸ್ಥಾನ ಮೂಲದ ಸೋಹಾನಿ ಕುಮಾರಿ ಟಾಲಿವುಡ್ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಸವಾಯಿ ಸಿಂಗ್‌ ಅವರು ಇನ್ಸ್‌ಟಾಗ್ರಾಮ್‌ ಮೂಲಕ ಪರಿಚಯವಾಗಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದ ಇವರು ನಂತರ ರಿಲೇಷನ್‌ಷಿಪ್‌ ಬೆಳೆಸಿಕೊಂಡರು. ಕಳೆದ ವರ್ಷ ಜುಲೈನಲ್ಲಿ ಇವರ ನಿಶ್ಚಿತಾರ್ಥ ಕೂಡ ನಡೆದಿತ್ತು. ಅಂದಿನಿಂದ, ದಂಪತಿಗಳು ಜುಬಿಲಿ ಹಿಲ್ಸ್ ಪ್ರಶಾಸನ್ ನಗರದಲ್ಲಿ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.

ತನ್ನ ಮಾಜಿ ಗರ್ಲ್‌ಫ್ರೆಂಡ್‌ಅನ್ನು ಮರೆಯಲು ಸವಾಯಿ ಸಿಂಗ್‌ ತುಂಬಾ ಕಷ್ಟಪಡುತ್ತಿದ್ದ. ಆರ್ಥಿಕವಾಗಿಯೂ ಬಹಳಷ್ಟು ಒತ್ತಡದ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿದ್ದ ಎಂದು ಸೋಹಾನಿ ಕುಮಾರಿ ಹೇಳಿದ್ದಾರೆ. ಪೊಲೀಸರು ವೀಡಿಯೊ ಸಂದೇಶವನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆಗಾಗಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.