Sunday, September 14, 2025

ಲಡಾಖ್‌ನಲ್ಲಿ ಸೇನಾ ವಾಹನ ಮೇಲೆ ಉರುಳಿ ಬಿದ್ದ ಬಂಡೆ: ಇಬ್ಬರು ಸೇನಾ ಸಿಬ್ಬಂದಿ ಹುತಾತ್ಮ

ಹೊಸ ದಿಗಂತ ಡಿಜಿಟಲ್ ಡೆಸ್ಕ್;

ಜಮ್ಮು ಮತ್ತು ಕಾಶ್ಮೀರದ ಪೂರ್ವ ಲಡಾಖ್‌ನಲ್ಲಿ ಸೇನಾ ವಾಹನದ ಮೇಲೆ ಬಂಡೆಯೊಂದು ಬಿದ್ದು, ಲೆಫ್ಟಿನೆಂಟ್ ಕರ್ನಲ್ ಸೇರಿದಂತೆ ಇಬ್ಬರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಮೂವರು ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೇಹ್‌ನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಗಾಲ್ವಾನ್‌ನ ಡರ್ಬುಕ್ ಬಳಿಯ ಚಾರ್‌ಬಾಗ್‌ನಲ್ಲಿ ಇಂದು ಈ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

ಮೃತರನ್ನು ಲೆಫ್ಟಿನೆಂಟ್ ಕರ್ನಲ್ ಭಾನು ಪ್ರತಾಪ್ ಸಿಂಗ್ ಮಂಕೋಟಿಯಾ ಮತ್ತು ಲ್ಯಾನ್ಸ್ ದಫದಾರ್ ದಲ್ಜಿತ್ ಸಿಂಗ್(14 ಸಿಂಧ್ ಹಾರ್ಸ್) ಎಂದು ಸೇನೆ ಗುರುತಿಸಿದೆ.

ಮೇಜರ್ ಮಾಯಾಂಕ್ ಶುಭಮ್(14 ಸಿಂಧ್ ಹಾರ್ಸ್), ಮೇಜರ್ ಅಮಿತ್ ದೀಕ್ಷಿತ್ ಮತ್ತು ಕ್ಯಾಪ್ಟನ್ ಗೌರವ್(60 ಆರ್ಮ್ಡ್) ಅವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ