ಉತ್ತರ ಕನ್ನಡದಲ್ಲಿ ವಿಲಕ್ಷಣ ಹವಾಮಾನ: ಮಳೆಗಾಲದಲ್ಲೇ ಬಿಸಿಗಾಳಿ ಆತಂಕ; ಯೆಲ್ಲೋ ಅಲರ್ಟ್ ಘೋಷಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಮಳೆಗಾಲದ ಮಧ್ಯೆಯೇ ಕರಾವಳಿ ಜಿಲ್ಲೆ ಉತ್ತರ ಕನ್ನಡದಲ್ಲಿ ವಿಲಕ್ಷಣ ಹವಾಮಾನ ಸೃಷ್ಟಿಯಾಗಿದ್ದು, ಮುಂದಿನ ಎರಡು ದಿನಗಳ ಕಾಲ ತೀವ್ರ ಬಿಸಿಗಾಳಿ ಹಾಗೂ ತೇವಾಂಶಯುಕ್ತ ವಾತಾವರಣ ಮುಂದುವರಿಯುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಮಳೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದು, ಮಳೆಯ ಕೊರತೆಯ ಬೆನ್ನಲ್ಲೇ ಒಮ್ಮೆಗೆ ಉಷ್ಣಾಂಶ ಏರಿಕೆಯಾಗಿ ಸಾರ್ವಜನಿಕರು ಬಿಸಿಲಿನ ಬೇಗೆಯಿಂದ ತತ್ತರಿಸುವಂತಾಗಿದೆ. ಇದನ್ನೂ ಓದಿ: ಆರೋಗ್ಯ ಇಲಾಖೆಯ … Continue reading ಉತ್ತರ ಕನ್ನಡದಲ್ಲಿ ವಿಲಕ್ಷಣ ಹವಾಮಾನ: ಮಳೆಗಾಲದಲ್ಲೇ ಬಿಸಿಗಾಳಿ ಆತಂಕ; ಯೆಲ್ಲೋ ಅಲರ್ಟ್ ಘೋಷಣೆ!