ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಯುಪಿಐ ಪಾವತಿ (UPI) ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆಗಸ್ಟ್ ತಿಂಗಳಲ್ಲಿ ಒಂದು ದಿನದಲ್ಲಿ ಸರಾಸರಿಯಾಗಿ 90,446 ಕೋಟಿ ರೂ ಮೌಲ್ಯದಷ್ಟು ಯುಪಿಐ ವಹಿವಾಟುಗಳು ನಡೆದಿವೆ.
ಸರಾಸರಿ ನಿತ್ಯದ ಯುಪಿಐ ವಹಿವಾಟು ಜನವರಿ ತಿಂಗಳಲ್ಲಿ 75,743 ಕೋಟಿ ರೂ ಇತ್ತು. ಜುಲೈನಲ್ಲಿ ಅದು 80,919 ಕೋಟಿ ರೂಗೆ ಏರಿದೆ. ಈಗ ಆಗಸ್ಟ್ನಲ್ಲಿ 90,000 ಕೋಟಿ ರೂ ಗಡಿ ದಾಟಿರುವುದು ಗಮನಾರ್ಹ.
ಒಂದು ದಿನದ ಸರಾಸರಿ ಯುಪಿಐ ಟ್ರಾನ್ಸಾಕ್ಷನ್ ಸಂಖ್ಯೆ 12.7 ಕೋಟಿ ಇತ್ತು. ಆಗಸ್ಟ್ನಲ್ಲಿ ಇದು 67.5 ಕೋಟಿಗೆ ಏರಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಕೌಂಟ್ಗಳಿಂದ 520 ಕೋಟಿ ಯುಪಿಐ ಟ್ರಾನ್ಸಾಕ್ಷನ್ಗಳು ಆಗಿವೆ. ಅಂದರೆ, ಈ ಅಕೌಂಟ್ಗಳಿಂದ ಹಣವನ್ನು ಯುಪಿಐ ಮೂಲಕ ಕಳುಹಿಸಲಾಗಿದೆ. ಯುಪಿಐ ಮೂಲಕ ಅತಿಹೆಚ್ಚು ಬಾರಿ ಹಣ ಸ್ವೀಕರಿಸಿರುವುದು ಯೆಸ್ ಬ್ಯಾಂಕ್ ಅಕೌಂಟ್ಗಳು. 800 ಕೋಟಿ ಟ್ರಾನ್ಸಾಕ್ಷನ್ಗಳಲ್ಲಿ ಯೆಸ್ ಬ್ಯಾಂಕ್ ಅಕೌಂಟ್ಗಳಿಗೆ ಹಣ ಬಂದಿದೆ.
ಯುಪಿಐ ಬಳಕೆಯಲ್ಲಿ ಕರ್ನಾಟಕ ನಂ. 2
ಅತಿಹೆಚ್ಚು ಯುಪಿಐ ಬಳಸುವ ಟಾಪ್-3 ರಾಜ್ಯಗಳಲ್ಲಿ ಕರ್ನಾಟಕ ಇದೆ. ಒಟ್ಟಾರೆ ಯುಪಿಐ ಬಳಕೆಯಲ್ಲಿ ಶೇ. 9.8ರಷ್ಟು ಪಾಲು ಮಹಾರಾಷ್ಟ್ರದ್ದು. ಇದು ಜುಲೈನಲ್ಲಿನ ಅಂಕಿ ಅಂಶ. ಕರ್ನಾಟಕದ ಪಾಲು ಶೇ. 5.5, ಉತ್ತರಪ್ರದೇಶದ ಪಾಲು ಶೇ. 5.3 ಇದೆ ಎನ್ನಲಾಗಿದೆ.