ಭಾರತ–ಚೀನಾ ಮೇಲೆ ಸುಂಕಾಸ್ತ್ರ ಪ್ರಯೋಗಕ್ಕೆ ಅಮೆರಿಕ ಬ್ರೇಕ್: 100% ತೆರಿಗೆ ಆತಂಕದಿಂದ ತಾತ್ಕಾಲಿಕ ರಿಲೀಫ್

ಹೊಸದಿಗಂತ ಡಿಜಿಟಲ್ ಡೆಸ್ಕ್: ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಭಾರೀ ಸುಂಕ ವಿಧಿಸುವ ಅಮೆರಿಕದ ಯೋಜನೆಗೆ ಸದ್ಯಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಸಂಬಂಧಿತ ರಫ್ತುಗಳ ವಿಚಾರದಲ್ಲಿ ಪ್ರಸ್ತಾಪಿಸಲಾಗಿದ್ದ ಹಲವು ನಿರ್ಬಂಧಗಳು ಮತ್ತು ಸುಂಕಗಳ ಜಾರಿಗೆ ವಿನಾಯಿತಿ ನೀಡಿದ್ದು, ಇದರಿಂದ ಭಾರತ ಮತ್ತು ಚೀನಾಗೆ ತಕ್ಷಣದ ಮಟ್ಟದಲ್ಲಿ ನಿರಾಳತೆ ಸಿಕ್ಕಿದೆ. ಟ್ರಂಪ್ ತಮ್ಮ ಕಾರ್ಯಕಾರಿ ಆದೇಶದಲ್ಲಿ, ಈ ಸಮಯದಲ್ಲಿ ವಿನಾಯಿತಿ ನೀಡುವುದು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗೆ ಅನುಕೂಲಕರವಾಗಿದೆ ಎಂದು ತಿಳಿಸಿದ್ದಾರೆ. … Continue reading ಭಾರತ–ಚೀನಾ ಮೇಲೆ ಸುಂಕಾಸ್ತ್ರ ಪ್ರಯೋಗಕ್ಕೆ ಅಮೆರಿಕ ಬ್ರೇಕ್: 100% ತೆರಿಗೆ ಆತಂಕದಿಂದ ತಾತ್ಕಾಲಿಕ ರಿಲೀಫ್