ವಂದೇ ಮಾತರಂ ವಿವಾದ: ಇತಿಹಾಸ ಸರಿಯಾಗಿ ಓದುವ ಅಗತ್ಯವಿದೆ ಎಂದ ಮಲ್ಲಿಕಾರ್ಜುನ ಖರ್ಗೆ

ಹೊಸದಿಗಂತ ವರದಿ ಕಲಬುರಗಿ: ವಂದೇ ಮಾತರಂ ಗೀತೆಯ ಕುರಿತು ನಡೆಯುತ್ತಿರುವ ವಿವಾದಕ್ಕೆ ಪ್ರತಿಕ್ರಿಯಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಇತಿಹಾಸವನ್ನು ಸರಿಯಾಗಿ ಓದಿ ತಿಳಿದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಕಲಬುರಗಿ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಸಿಗುವ ಮುನ್ನವೇ ವಂದೇ ಮಾತರಂ ಗೀತೆಯನ್ನು ಎರಡು ಪ್ಯಾರಾಗಳಿಗೆ ಸೀಮಿತಗೊಳಿಸಲಾಗಿತ್ತು. ಇಂದಿಗೂ ಕಾಂಗ್ರೆಸ್ ಸೇವಾದಳ ಅದೇ ಎರಡು ಪ್ಯಾರಾಗಳನ್ನು ಹಾಡುತ್ತಿದೆ ಎಂದು ತಿಳಿಸಿದರು. ರವೀಂದ್ರನಾಥ ಟ್ಯಾಗೋರ್ ಕೂಡ ಎರಡು ಪ್ಯಾರಾಗಳನ್ನೇ ಹಾಡುವ ಕುರಿತು ಹೇಳಿದ್ದರು. ನಾವು ಅದನ್ನೇ ಹಾಡಿದರೆ ದೇಶದ್ರೋಹಿಗಳಾಗುತ್ತೇವೆಯೇ ಎಂದು ಪ್ರಶ್ನಿಸಿದ … Continue reading ವಂದೇ ಮಾತರಂ ವಿವಾದ: ಇತಿಹಾಸ ಸರಿಯಾಗಿ ಓದುವ ಅಗತ್ಯವಿದೆ ಎಂದ ಮಲ್ಲಿಕಾರ್ಜುನ ಖರ್ಗೆ