Sunday, October 26, 2025

ರಾಜ್ಯ ಸರ್ಕಾರದಿಂದ ವೀರಶೈವ ಸಮಾಜಕ್ಕೆ ಸಾಕಷ್ಟು ತೊಂದರೆ: ಈಶ್ವರಪ್ಪ ಆಕ್ರೋಶ

ಹೊಸ ದಿಗಂತ ವರದಿ ವಿಜಯಪುರ:

ರಾಜ್ಯ ಸರ್ಕಾರ ವೀರಶೈವ ಸಮಾಜವನ್ನು ತುಂಡು ತುಂಡು ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಹಿಂದೂ ಸಮಾಜ, ವೀರಶೈವ, ಲಿಂಗಾಯತ ಸಮಾಜಕ್ಕೆ ಸಾಕಷ್ಟು ತೊಂದರೆ ಕೊಡುವುದು ಕಾಣುತ್ತಿದೆ ಎಂದರು.

ಸದ್ಯ ಸಾಧು ಸಂತರನ್ನು ಸಹಿತ ಬಿಡುತ್ತಿಲ್ಲ. ಕನ್ಹೇರಿ ಮಠದ ಶ್ರೀಗಳಿಗೆ ವಿಜಯಪುರ ಹಾಗೂ ಬಾಗಲಕೋಟೆ ಗೆ ನಿರ್ಬಂಧ ವಿಧಿಸುವ ಹಂತಕ್ಕೂ ಹೋಗಿದೆ‌. ಇದನ್ನು ಯಾವುದೇ ಕಾರಣಕ್ಕೂ ನಾವು ಕ್ಷಮಿಸುವುದಿಲ್ಲ ಎಂದರು.

ಕನ್ಹೇರಿ ಶ್ರೀಗಳ ನಿರ್ಬಂಧ ವಿಚಾರವಾಗಿ ಅ. 29 ರಂದು ಬೆಳಗಾವಿಯ ವೆಲ್ ಕಮ್ ಹೊಟೇಲ್ ನಲ್ಲಿ ಸಭೆ ಕರೆಯಲಾಗಿದೆ. ಹಿಂದೂ ಸಮಾಜದ ಪ್ರಮುಖರು ಸೇರಿದಂತೆ ಹಲವರು ಭಾಗವಹಿಸುವುರು. ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ನಾರಾಯಣಾ ಸಾ ಬಾಂಡಗೆ, ಈರಣ್ಣ ಕಡಾಡಿ, ಪ್ರತಾಪ್ ಸಿಂಹ, ಪ್ರಮೋದ ಮುತಾಲಿಕ್ ಸೇರಿದಂತೆ ಹಲವರು ಭಾಗವಹಿಸುವರು. ಆ ಸಭೆಯಲ್ಲಿ ಕನ್ಹೇರಿಯ ಜಗದ್ಗುರುಗಳು ಸಹಿತ ಇರಬೇಕು ಎಂದು ನಾವು ಮನವಿ ಮಾಡಿದ್ದೇವೆ ಎಂದರು.

ಕನ್ಹೇರಿ ಶ್ರೀಗಳ ನಿರ್ಬಂಧ ವಾಪಸ್ ಪಡೆಯಲು ಏನು ತೀರ್ಮಾನ ತಗೆದುಕೊಳ್ಳಬೇಕು ಅಲ್ಲಿ ನಿರ್ಣಯ ಮಾಡಲಾಗುವುದು. ಇಡೀ ಹಿಂದೂ ಸಮಾಜ ವಿರಶೈವ, ಲಿಂಗಾಯತ ಸಮಾಜದ ಆಕ್ರೋಶ ಬಹಿರಂಗ ಆಗುವ ಮುಂಚೆ ಮುಖ್ಯಮಂತ್ರಿ ಅವರು ನಿರ್ಬಂಧ ವಾಪಸ್ ಪಡೆಯಬೇಕು ಎಂದರು.

ಕೊರ್ಟ್ ಮೂಲಕ ಏನು ಮಾಡಬೇಕು ಆ ತೀರ್ಮಾನ ಒಂದೆಡೆ ನಡೆದಿದೆ. ಆದರೆ ಇಡೀ ಸಮಾಜಕ್ಕೆ ಈ ವಿಚಾರವಾಗಿ ಆಕ್ರೋಶ ಇದೆ. ತಕ್ಷಣ ಸರ್ಕಾರ ಈ ನಿರ್ಬಂಧ ವಾಪಸ್ ಪಡೆಯಬೇಕು ಎಂದರು.

ಕನ್ಹೇರಿ ಶ್ರೀಗಳು ಕ್ಷಮೆಯಾಚಿಸಲಿ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರ ಹೇಳಿಕೆ ವಿಚಾರಕ್ಕೆ, ಅವರ ನಿರ್ಬಂಧ ವಾಪಸ್ ಪಡೆಯಲು ಜಿಲ್ಲಾ ಉಸ್ತುವಾರಿ ಸಚಿವರು ಯಾರು?, ನಿರ್ಬಂಧ ವಾಪಸ್ ಪಡೆಯಲು ಸಚಿವರಿಗೆ ಅಧಿಕಾರ ಕೊಟ್ಟಿದ್ದಾರಾ ? ಎಂದು ಪ್ರಶ್ನಿಸಿದರು.

ದೇವಸ್ಥಾನಕ್ಕೆ ಹೋಗಬೇಡಿ, ಮಾಂಸ ತಿನ್ನಿ ಎನ್ನುವುದು ಯಾರು ಸಹಿಸಿಕೊಳ್ಳುತ್ತಾರೆ ? ಎಂದರು.

ಎಸ್ ಟಿ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಸವರಾಜ ಬೊಮ್ಮಯಿ ಸಿಎಂ ಆಗಿರುವ ಸಂದರ್ಭದಲ್ಲಿ ಹೋರಾಟ ಮಾಡಿ ರಾಜ್ಯ ಸರ್ಕಾರ ಕ್ಕೆ ಮನವಿ ಮಾಡಲಾಗಿದೆ. ಕುಲ ಶಾಸ್ತ್ರದ ಅಧ್ಯಯನ ಬಂದ ತಕ್ಷಣ, ಸಿಎಂ ಅವರು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದಾರೆ ಎಂಬುವದಿದೆ. ಈಗ ಅವೆರೆಡೂ ಪೈಲ್ ವಾಪಸ್ ಬಂದಿದೆ‌ ಎಂಬ ಸುದ್ದಿ ಇದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಗ್ರಪ್ಪನವರ ಉಗ್ರಾವತಾರ ತಾಳದೆ ನಾನು ಹೋರಾಟ ಮಾಡಿಲ್ಲ ಈಶ್ವರಪ್ಪ ಮಾಡಿದ್ದು ಎಂದಿದ್ದಾರೆ. ದೆಹಲಿಯಿಂದ ಕ್ಲಾರಿಫಿಕೇಶನ್ ಬಂದ ಬಳಿಕ ಸಿಎಂ ಅದಕ್ಕೇನು‌ ಉತ್ತರ ಕೊಟ್ಟು ಕಳಿಸಿದ್ದೀರಿ ಎಂಬುದು ಸ್ಪಷ್ಟ ಪಡಿಸಲಿ ಎಂದರು.

ಈ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಮರಿಗಾಗಿ ಮಾತ್ರ ಕೆಲಸ ಮಾಡುತ್ತಿದೆ. ಆದರೆ ರಾಮಲಿಂಗಾ ರೆಡ್ಡಿ ಅವರು ಮುಜರಾಯಿ‌ ದೇವಸ್ಥಾನದಲ್ಲಿ ಗೋ ಪೂಜೆ ಮಾಡಿ ಎಂದಿದ್ದಕ್ಕೆ ಅಭಿನಂದನೆ ಸಲ್ಲಿಸುವೆ ಎಂದರು.

error: Content is protected !!