Sunday, October 12, 2025

ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟ ವಿಜಯ್ –ರಶ್ಮಿಕಾ: ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ್ರಾ ಹೇಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಾಲಿವುಡ್‌ನ ಬಹುಚರ್ಚಿತ ಜೋಡಿ ವಿಜಯ್ ದೇವರಕೊಂಡ ಮತ್ತು ಕನ್ನಡದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪ್ರೇಮಕಥೆಯ ಬಗ್ಗೆ ಹಲವು ದಿನಗಳಿಂದ ವದಂತಿಗಳು ಕೇಳಿಬರುತ್ತಿದ್ದವು. ಇಬ್ಬರೂ ಸಂಬಂಧದ ಬಗ್ಗೆ ಯಾವತ್ತೂ ಓಪನ್ ಅಪ್ ಆಗಿ ಮಾತನಾಡದಿದ್ದರೂ, ಅವರ ಮೌನವೇ ಸಾಕಷ್ಟು ಹೇಳುತ್ತಿದ್ದಂತೆ ಇತ್ತು. ಇದೀಗ, ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹೊರಬಂದಿದ್ದು, ಅಭಿಮಾನಿಗಳಿಗೆ ದೊಡ್ಡ ಅಚ್ಚರಿ ತಂದಿದೆ.

ದಸರಾ ಹಬ್ಬದ ದಿನ, ಅಂದರೆ ವಿಜಯದಶಮಿಯ ಶುಭ ಸಂದರ್ಭದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಕುಟುಂಬದವರ ಸಮ್ಮುಖದಲ್ಲಿ ಅತ್ಯಂತ ಖಾಸಗಿ ರೀತಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ನಿಶ್ಚಿತಾರ್ಥವೇ ಮದುವೆಯ ಅರ್ಧ ಭಾಗ ಎಂದು ಹೇಳುವಂತೆ, ಈಗ ಈ ಜೋಡಿ ಹಸೆಮಣೆ ಏರುವುದು ಯಾವಾಗ ಎಂಬ ಕುತೂಹಲ ಮೂಡಿದೆ. ಮೂಲಗಳ ಪ್ರಕಾರ, ವಿಜಯ್ ಮತ್ತು ರಶ್ಮಿಕಾ 2026ರಲ್ಲಿ ಮದುವೆಯಾಗುವ ಯೋಜನೆ ರೂಪಿಸಿಕೊಂಡಿದ್ದಾರೆ. ಸದ್ಯ ಇಬ್ಬರೂ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದರಿಂದ ಮದುವೆಯನ್ನು ಮುಂದೂಡಲಾಗಿದೆ ಎನ್ನಲಾಗಿದೆ.

ತಮ್ಮ ವೃತ್ತಿಜೀವನದ ಬ್ಯುಸಿಯ ನಡುವೆಯೂ ಈ ಜೋಡಿ ಸಂಬಂಧವನ್ನು ಮುಂದುವರಿಸಿಕೊಂಡು ನಿಶ್ಚಿತಾರ್ಥದ ಹಂತಕ್ಕೆ ತಲುಪಿರುವುದು ಅಭಿಮಾನಿಗಳಿಗೆ ವಿಶೇಷ ಸಂತೋಷ ತಂದಿದೆ. ಅಧಿಕೃತ ಘೋಷಣೆ ಇನ್ನು ಬಾಕಿ ಇದ್ದರೂ, ಈ ಸುದ್ದಿಯೇ ಸಾಕಷ್ಟು ಕುತೂಹಲ ಮೂಡಿಸಿದೆ.

error: Content is protected !!