ಹೊಸದಿಗಂತ ವರದಿ ಹುಬ್ಬಳ್ಳಿ:
ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಅವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.
ಬಿಜೆಪಿ ಕಾರ್ಯಕರ್ತರು ಇಲ್ಲಿಯ ಕೇಶ್ವಾಪುರ ಪೊಲೀಸ್ ನುಗ್ಗಲು ಯತ್ನಸಿದರು. ಈ ವೇಳೆ ಪೊಲೀಸ್ ಹಾಗೂ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆಯಿತು.
ಬಿಜೆಪಿ ಮೇಯರ್ ಜ್ಯೋತಿ ಪಾಟೀಲ ಹಾಗೂ ಉಪಮೇಯರ್ ಸಂತೋಷ ಚವ್ಹಾಣ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪೊಲೀಸ್ ಠಾಣೆಯೂ ಸಾರ್ವಜನಿಕರ ಆಸ್ತಿಯಾಗಿದೆ. ಪೊಲೀಸ್ ಠಾಣೆಯೊಳಗೆ ಪ್ರವೇಶ ನೀಡದಿರುವುದು ಖಂಡನೀಯ. ಮಹಾನಗರ ಪಾಲಿಕೆ ಪ್ರಥಮ ಪ್ರಜೆ ಬಂದರು ಠಾಣೆ ಹೊರಗಡೆ ನಿಲ್ಲಿಸಿದ್ದಾರೆ. ಇದು ಮೇಯರ್ ಗೆ ಮಾಡಿದ ಅವಮಾನ.
ಈ ವೇಳೆ ಮೇಯರ್ ಜ್ಯೋತಿ ಪಾಟೀಲ ಮಾತನಾಡಿ, ಒಬ್ಬ ಮಹಿಳೆಯ ಸಲುವಾಗಿ ನ್ಯಾಯ ಕೇಳಲು ಬಂದಿರುವ ನಮಗೆ ಠಾಣೆಯೊಳಗೆ ಬಿಡುತ್ತಿಲ್ಲ. ಇದು ಯಾವ ನ್ಯಾಯ. ಇದು ಜನ ಪ್ರತಿನಿಧಿಗಳಿಗೆ ಮಾಡಿದ ಅವಮಾನ ಎಂದು ಪೊಲೀಸರ ವಿರುದ್ಧ ಕಿಡಿಕಾರಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ನಿಶನಗೌಡ, ರೂಪಾ ಶೆಟ್ಟಿ, ಉಮಾ ಮುಕುಂದ, ಜಿಲ್ಲಾ ಅಧ್ಯಕ್ಷ ಸೀಮಾ ಲದ್ವಾ, ಅಕ್ಕ ಮಹಾದೇವಿ ಹೆಗಡೆ, ದುರ್ಗಮ್ಮ ಬಿಜವಾಡ, ಚಂದ್ರಿಕಾ ಮೇಸ್ತ್ರಿ, ಶಿವು ಮೆಣಸಿನಕಾಯಿ, ಮಂಜುನಾಥ್ ಕಾಟಕರ, ನಾರಾಯಣ ಜರತಾರಘರ ಇದ್ದರು.
ಬಿಜೆಪಿ ಕಾರ್ಯಕರ್ತೆ ಮೇಲೆ ದೌರ್ಜನ್ಯ: ಹುಬ್ಬಳ್ಳಿಯಲ್ಲಿ ತೀವ್ರ ಸ್ವರೂಪ ಪಡೆದ ಪ್ರೊಟೆಸ್ಟ್!

