Sunday, January 11, 2026

VIRAL | ಮೀನು ಪ್ರಿಯರೆ ಎಚ್ಚರ… ಎಚ್ಚರ…! ಒಂದ್ಸಲ ಈ ವಿಡಿಯೋ ನೋಡಿ ಸಾಕು! ಮತ್ಯಾವತ್ತು ಮೀನು ಮುಟ್ಟೋಕು ಹೋಗಲ್ಲ

ಮೀನು ತಿನ್ನೋದು ಆರೋಗ್ಯಕ್ಕೆ ಒಳ್ಳೆಯದು ಅಂತ ಎಲ್ಲರೂ ಹೇಳೋದನ್ನು ಕೇಳಿರ್ತೀವಿ. ವೈದ್ಯರು ಕೂಡ “ಮೀನಿನಲ್ಲಿ ಪ್ರೋಟೀನ್ ಹೆಚ್ಚು, ತಿನ್ನೋದು ಒಳ್ಳೆಯದು” ಅಂತ ಸಲಹೆ ಕೊಡ್ತಾರೆ. ಆದರೆ ಇತ್ತೀಚೆಗೆ ವೈರಲ್ ಆಗಿರೋ ಒಂದು ವಿಡಿಯೋ ನೋಡಿದ್ರೆ ಯಾರೊಬ್ಬರೂ ಮೀನು ತಿನ್ನಲ್ಲ ಪಕ್ಕ! ಈ ವಿಡಿಯೋ ನೋಡಿ ತುಂಬಾ ಜನ “ನಮ್ಮ ಆರೋಗ್ಯವೇ ಅಪಾಯದಲ್ಲಿದೆನಾ?” ಅಂತ ಆತಂಕ ಪಡ್ತಾ ಇದ್ದಾರೆ.

ವೈರಲ್ ವಿಡಿಯೋ – ಮೀನಿಗೆ ಹಾರ್ಮೋನ್ ಇಂಜೆಕ್ಷನ್?!
ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ಒಂದು ವಿಡಿಯೋದಲ್ಲಿ, ಕೆಲವರು ಮೀನಿಗೆ ಹಾರ್ಮೋನ್ ಇಂಜೆಕ್ಷನ್ ಕೊಡುವ ದೃಶ್ಯ ಸೆರೆಯಾಗಿದೆ. 17α-ಮಿಥೈಲ್ಟೆಸ್ಟೊಸ್ಟೆರಾನ್ ಎಂಬ ಸ್ಟಿಯರಾಯ್ಡ್ ಹಾರ್ಮೋನ್‌ನನ್ನು ಮೀನಿಗೆ ಚುಚ್ಚುತ್ತಿದ್ದಾರೆ. ಇದರಿಂದ ಮೀನು ಅಸಹಜವಾಗಿ ವೇಗವಾಗಿ ಬೆಳೆದು ತೂಕ ಹೆಚ್ಚಾಗುತ್ತಿದೆ.

ಇದು ಕೇವಲ ಲಾಭಕ್ಕಷ್ಟೇ – ಆರೋಗ್ಯದ ಮೇಲೆ ಭಾರೀ ಅಪಾಯ
ಈ ಪದ್ಧತಿ ಸಂಪೂರ್ಣ ಕಾನೂನುಬಾಹಿರ. ಆದರೆ ಲಾಭಕ್ಕಾಗಿ ಕೆಲವರು ಮೀನಿಗೆ ಈ ರೀತಿಯ ಸ್ಟಿಯರಾಯ್ಡ್ ನೀಡುತ್ತಿದ್ದಾರೆ. ಈ “ಬಾಹ್ಯ ಹಾರ್ಮೋನ್” ಮೀನಿನ ದೇಹದಲ್ಲಿ ಉಳಿಯುತ್ತದೆ. ನಾವು ಅದು ತಿಂದಾಗ, ಆ ಹಾರ್ಮೋನುಗಳು ನೇರವಾಗಿ ನಮ್ಮ ದೇಹದೊಳಗೆ ಸೇರುತ್ತವೆ.

ತಜ್ಞರ ಎಚ್ಚರಿಕೆ ಪ್ರಕಾರ, ಈ ಹಾರ್ಮೋನ್ ಮಿಶ್ರಿತ ಮೀನು ತಿಂದರೆ ದೀರ್ಘಕಾಲಿಕವಾಗಿ ಕೆಳಗಿನ ಸಮಸ್ಯೆಗಳಿಗೆ ಕಾರಣವಾಗಬಹುದು:

ಹಾರ್ಮೋನು ಅಸಮತೋಲನ

ಮಕ್ಕಳಲ್ಲಿ ಬೇಗನೆ ಪ್ರೌಢಾವಸ್ಥೆ ಬೆಳವಣಿಗೆ

ಮಹಿಳೆಯರ ಸಂತಾನೋತ್ಪತ್ತಿ ಸಮಸ್ಯೆ

ಅಂತಃಸ್ರಾವಕ ಗ್ರಂಥಿಗಳ ತೊಂದರೆ

ಕೆಲವು ಕ್ಯಾನ್ಸರ್‌ಗಳ ಅಪಾಯ

ಪರಿಸರಕ್ಕೂ ಅಪಾಯವಿದೆ
ಈಮೀನು ಸಾಕಣೆಯಲ್ಲಿ ಬಳಸಿದ ರಾಸಾಯನಿಕ ಹಾರ್ಮೋನುಗಳು ನೀರಿಗೆ ಸೇರುತ್ತವೆ. ನಂತರ ಆ ನೀರು ನದಿಗಳಿಗೆ ಸೇರುವ ಮೂಲಕ ಮೀನು, ಜಲಚರ ಪ್ರಾಣಿಗಳು ಮತ್ತು ಸಸ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಸಂಪೂರ್ಣ ಜೈವಿಕ ಚಕ್ರವನ್ನೇ ಅಸ್ತವ್ಯಸ್ತ ಮಾಡಬಹುದು.

ಈ ರೀತಿಯ ಹಾರ್ಮೋನ್ ಇಂಜೆಕ್ಷನ್ ಬಳಕೆ ಸರಕಾರದಿಂದ ನಿಷೇಧಿತವಾಗಿದೆ. ವೈರಲ್ ವಿಡಿಯೋದಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಹಾಗೂ ಆರೋಗ್ಯ ತಜ್ಞರು ಒತ್ತಾಯಿಸುತ್ತಿದ್ದಾರೆ.

View this post on Instagram

A post shared by Fish info (@subrata_chowhan)

error: Content is protected !!