Saturday, October 4, 2025

Viral | ನೋಡ್ತಿದಂಗೆ ಎರಡು ವಿಮಾನ ಡಿಕ್ಕಿ! ಆಮೇಲೇನಾಯ್ತು..?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಪ್ರಸಿದ್ಧ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಎರಡು ಡೆಲ್ಟಾ ಏರ್‌ಲೈನ್ಸ್ ವಿಮಾನಗಳು ಪರಸ್ಪರ ಡಿಕ್ಕಿಯಾದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಸ್ಥಳೀಯ ಸಮಯ ರಾತ್ರಿ 9:56 ಕ್ಕೆ ನಡೆದ ಈ ಘಟನೆ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿತು.

ವರದಿಗಳ ಪ್ರಕಾರ, ರನ್‌ವೇ ಕಡೆಗೆ ತೆರಳುತ್ತಿದ್ದ ಒಂದು ವಿಮಾನದ ಮುಂಭಾಗ, ಪಕ್ಕದಲ್ಲಿದ್ದ ಮತ್ತೊಂದು ವಿಮಾನದ ರೆಕ್ಕೆಗೆ ಡಿಕ್ಕಿಯಾಯಿತು. ಪರಿಣಾಮವಾಗಿ ಒಂದು ವಿಮಾನದ ರೆಕ್ಕೆ ಮುರಿದುಹೋಯಿತು ಹಾಗೂ ಇನ್ನೊಂದು ವಿಮಾನದ ಮುಂಭಾಗಕ್ಕೆ ಹಾನಿಯಾಯಿತು. ಈ ದೃಶ್ಯ ಸ್ಥಳದಲ್ಲಿದ್ದವರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ವೈರಲ್ ಆಗಿದೆ.

ಅಪಘಾತದಲ್ಲಿ ಒಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಬಗ್ಗೆ ಡೆಲ್ಟಾ ಏರ್‌ಲೈನ್ಸ್ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಸ್ಮರಣೀಯ ವಿಷಯವೆಂದರೆ, ಈ ವರ್ಷದ ಮಾರ್ಚ್ ತಿಂಗಳಲ್ಲಿ ಇದೇ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ಏರ್‌ಲೈನ್ಸ್ ವಿಮಾನದ ರೆಕ್ಕೆ ಲ್ಯಾಂಡಿಂಗ್ ವೇಳೆ ರನ್‌ವೇಗೆ ಡಿಕ್ಕಿಯಾಗಿತ್ತು. ಆ ಸಂದರ್ಭ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತನಿಖೆ ನಡೆಸಿತ್ತು. ಇತ್ತೀಚಿನ ಘಟನೆ ಮತ್ತೊಮ್ಮೆ ಡೆಲ್ಟಾ ಏರ್‌ಲೈನ್ಸ್ ವಿಮಾನಗಳ ಸುರಕ್ಷತೆ ಕುರಿತ ಪ್ರಶ್ನೆ ಎಬ್ಬಿಸಿದೆ.