Wednesday, December 24, 2025

ಹಾಸನಾಂಬೆ ದರುಶನಕ್ಕೆ ಹೋಗ್ಬೇಕಾ? ಈ ಊರುಗಳಿಂದ ಇದೆ ವಿಶೇಷ ಪ್ಯಾಕೇಜ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಹಾಸನಾಂಬೆ ದರ್ಶನಕ್ಕೆ ವಿಶೇಷ ಪ್ಯಾಕೇಜ್ ವ್ಯವಸ್ಥೆ ಕಲ್ಪಿಸಲಾಗಿದೆ.

ಅಕ್ಟೋಬರ್ 10 ರಿಂದ 22 ರ ವರೆಗೆ ಹಾಸನಾಂಬೆ ದರುಶನಕ್ಕೆ ವಿಶೇಷ ಪ್ರವಾಸ ಆಯೋಜನೆ ಮಾಡಲಾಗಿದೆ.ಬೆಂಗಳೂರಿನಿಂದ ನುಗ್ಗೆಹಳ್ಳಿ ಲಕ್ಷ್ಮೀ ನರಸಿಂಹಸ್ವಾಮಿ, ನಾಗರ ನವಿಲೇ ನಾಗೇಶ್ವರ ಮತ್ತು ಹಾಸನಾಂಬೆ ದರುಶನ ಮುಗಿಸಿ ವಾಪಸ್ ಬರುವುದು. ಬೆಂಗಳೂರಿನಿಂದ ಹೊರಡುವ ಪ್ರವಾಸಿಗರಿಗೆ 2,016 ರೂಪಾಯಿ ನಿಗದಿ. ಮಾಡಲಾಗಿದೆ. ಇದರಲ್ಲಿ ಹಾಸನಾಂಬೆ ದರುಶನದ ಪಾಸ್ 1,000 ರೂಪಾಯಿ ಒಳಗೊಂಡಿದೆ.

ಮೈಸೂರಿನಿಂದಲೂ ಟೂರ್ ಪ್ಯಾಕೇಜ್ ಇದ್ದು, 1,250 ರೂಪಾಯಿ ನಿಗದಿ ಮಾಡಲಾಗಿದೆ. ಮೈಸೂರು, ಬೇಲೂರು ಹಾಗೂ ಹಳೇಬೀಡು ಮೂರು ಸ್ಥಳಗಳನ್ನು ಹೊಂದಿದೆ. 

error: Content is protected !!