ಬೆಂಗಳೂರಿಗೆ ‘ಜಲಕಂಟಕ’?: KRSನಲ್ಲಿ ಕುಸಿದ ನೀರಿನ ಮಟ್ಟ; ಮುಂಗಾರು ತಡವಾದರೆ ಸಂಕಷ್ಟ ಕಟ್ಟಿಟ್ಟಬುತ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೇಸಿಗೆ ಇನ್ನಷ್ಟೇ ಆರಂಭವಾಗಿದ್ದರೂ, ಕೃಷ್ಣ ರಾಜ ಸಾಗರ ಡ್ಯಾಮ್ ನಲ್ಲಿ ನೀರಿನ ಮಟ್ಟ ಗಮನಾರ್ಹವಾಗಿ ಇಳಿಕೆಯಾಗಿರುವುದು ಆತಂಕ ಹುಟ್ಟಿಸಿದೆ. ಪ್ರಸ್ತುತ ಜಲಾಶಯದ ಮಟ್ಟ 99 ಅಡಿಗೆ ಕುಸಿದಿದ್ದು, ಮುಂದಿನ ದಿನಗಳಲ್ಲಿ ಮಳೆ ತಡವಾದರೆ ನೀರಿನ ಕೊರತೆ ಎದುರಾಗುವ ಸಾಧ್ಯತೆ ಹೆಚ್ಚಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಈ ಜಲಾಶಯವು ಈ ವರ್ಷ ಆರಂಭದಲ್ಲೇ ಭರ್ತಿಯಾಗಿ ದಾಖಲೆ ಬರೆದಿತ್ತು. ಆದರೆ ಈಗ ಗರಿಷ್ಠ 124.80 ಅಡಿ ಸಾಮರ್ಥ್ಯದ ವಿರುದ್ಧ ನೀರಿನ ಮಟ್ಟ ಕುಸಿತ ಕಂಡಿದೆ. … Continue reading ಬೆಂಗಳೂರಿಗೆ ‘ಜಲಕಂಟಕ’?: KRSನಲ್ಲಿ ಕುಸಿದ ನೀರಿನ ಮಟ್ಟ; ಮುಂಗಾರು ತಡವಾದರೆ ಸಂಕಷ್ಟ ಕಟ್ಟಿಟ್ಟಬುತ್ತಿ