Saturday, September 13, 2025

ನಾವು ಸನಾತನಿಗಳು…ಮನೆಯ ಮೇಲೆ ಗುಂಡಿನ ದಾಳಿಗೆ ನಟಿ ದಿಶಾ ಪಟಾನಿ ತಂದೆ ರಿಯಾಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದಲ್ಲಿನ ಬಾಲಿವುಡ್ ನಟಿ ದಿಶಾ ಪಟಾನಿ ಅವರ ಬರೇಲಿಯ ಮನೆಯ ಮೇಲೆ ಗುಂಡಿನ ದಾಳಿ ನಡೆದಿದ್ದು, ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಗ್ಯಾಂಗ್ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.

ಇದೀಗ ದಿಶಾ ಅವರ ತಂದೆ ಜಗ್ದೀಶ್ ಪಟಾನಿ ಈ ಘಟನೆಯನ್ನು ಷಡ್ಯಂತ್ರ ಎಂದು ಖಂಡಿಸಿದ್ದಾರೆ.

ಬರೇಲಿಯ ಸಿವಿಲ್ ಲೈನ್ಸ್‌ನ ವಿಲ್ಲಾ ನಂ. 40ರಲ್ಲಿ ದಿಶಾ ಕುಟುಂಬ ವಾಸಿಸುತ್ತದೆ. ಬೆಳಿಗ್ಗೆ 4:30ಕ್ಕೆ ಇಬ್ಬರು ದಾಳಿಕೋರರು ಬೈಕ್‌ನಲ್ಲಿ ಬಂದು ಎರಡು ಗಾಳಿಯಲ್ಲಿ ಗುಂಡುಗಳನ್ನು ಹಾರಿಸಿದ್ದು ಯಾರೂ ಗಾಯಗಳಾಗಿಲ್ಲ.

SSP ಅನುರಾಗ್ ಆರ್ಯಾ ಪ್ರಕಾರ, ದಿಶಾ ಕುಟುಂಬದ ದೂರಿನ ಮೇರೆಗೆ ಐದು ತಂಡಗಳನ್ನು ರಚಿಸಿ ತನಿಖೆ ಆರಂಭಿಸಲಾಗಿದೆ. ದಾಳಿಕೋರರು ದೆಹಲಿ-ಲಖನೌ ಹೈವೇ ಮೂಲಕ ಪರಾರಿಯಾಗಿದ್ದಾರೆ.

ಗೋಲ್ಡಿ ಬ್ರಾರ್ ಗ್ಯಾಂಗ್‌ನ ವಿರೇಂದ್ರ ಚರಣ್ ಮತ್ತು ಮಹೇಂದ್ರ ಸರಣ್ ಸಾಮಾಜಿಕ ಮಾಧ್ಯಮದಲ್ಲಿ, ‘ಖುಶ್ಬೂ ಮತ್ತು ದಿಶಾ ಸಂತ ಪ್ರೇಮಾನಂದ್ ಜಿ ಮತ್ತು ಅನಿರುದ್ಧಾಚಾರ್ಯರನ್ನು ಅವಮಾನಿಸಿದ್ದಾರೆ. ಸನಾತನ ಧರ್ಮಕ್ಕೆ ಅಗೌರವ ತೋರಿದ್ದಾರೆ. ಇದು ಟ್ರೇಲರ್ ಮಾತ್ರ. ಮುಂದೆ ಧರ್ಮಕ್ಕೆ ಅಗೌರವ ತೋರಿದರೆ ಯಾರೂ ಬದುಕುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.

ಇದೀ. ಘಟನೆ ಬಗ್ಗೆ ಖುಶ್ಬೂ ತಂದೆ ಜಗ್ದೀಶ್ ಪಟಾನಿ ಮಾತನಾಡಿ, ‘ಖುಶ್ಬೂ ಹೇಳಿಕೆಯನ್ನು ತಿರುಚಲಾಗಿದೆ. ನಾವು ಸನಾತನಿಗಳು, ಸಂತರನ್ನು ಗೌರವಿಸುತ್ತೇವೆ. ಇದು ನಮ್ಮನ್ನು ಕೆಳಗಿಳಿಸುವ ಷಡ್ಯಂತ್ರ’ ಎಂದಿದ್ದಾರೆ.

ಇದನ್ನೂ ಓದಿ