ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಪಾಪ ನಮ್ಮ ಹುಡುಗ. ಆ ಹೆಣ್ಣು ಮಗಳು ನಮ್ಮ ಮನೆಗೆ ಬಂದಿದ್ಲು. ಅವನು ಜೈಲಿಗೆ ಹೋಗೋದಕ್ಕೂ, ನಮಗೂ ಸಂಬಂಧವಿಲ್ಲ. ಅಭಿಮಾನಿಗಳು ಕೋರ್ಟ್ ಹೋಗಲಿ ನಾವೇನೂ ಬೇಡ ಅಂತಿವಾ. ಪ್ರತಿಭಟನೆ ಮಾಡುತ್ತಾರೆ ಎಂದರೆ ಅವರ ಸುದ್ದಿಗೆ ನಾನು ಯಾಕೆ ಹೋಗಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ನಟ ದರ್ಶನ್ ಅಭಿಮಾನಿಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿಚಾರ ಪ್ರತಿಕ್ರಿಯಿಸಿದ ಅವರು, ದರ್ಶನ್ ಅಭಿಮಾನಿಗಳ ಪ್ರತಿಭಟನೆಯ ಹಿಂದೆ ತಮ್ಮ ವಿರುದ್ಧದ ರಾಜಕೀಯ ಷಡ್ಯಂತ್ರವಿದೆ ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ನಾನು ಯಾರ ಸುದ್ದಿಗೂ ಹೋಗಿಲ್ಲ. ನನಗೂ ಅದಕ್ಕೂ ಸಂಬಂಧ ಇಲ್ಲ. ರಾಜಕೀಯವಾಗಿ ನನ್ನ ಮೇಲೆ ದೊಡ್ಡ ಪಿತೂರಿ ನಡೆಸುತ್ತಿರಬಹುದು. ‘ಅವನು ಪಾಪ ನಮ್ಮ ಹುಡುಗ. ಆ ಹೆಣ್ಣು ಮಗಳು ನಮ್ಮ ಮನೆಗೆ ಬಂದಿದ್ಲು. ನಮಗೂ ಅದಕ್ಕೂ ಸಂಬಂಧವಿಲ್ಲ. ಏನಿದ್ದರೂ ಲಾ ಡಿಪಾರ್ಟ್‌ಮೆಂಟ್, ಹೋಮ್ ಮಿನಿಸ್ಟರ್ ಮಾಡಬೇಕು. ಕೋರ್ಟ್ ಹೋಗಿ ನಾವೇನೂ ಬೇಡ ಅಂತಿವಾ. ಪ್ರತಿಭಟನೆ ಮಾಡುವವರ ಸುದ್ದಿಗೆ ನಾನು ಯಾಕೆ ಹೋಗ್ಲಿ. ಇದು ರಾಜಕೀಯ ಒಂದು ಷಡ್ಯಂತ್ರ. ನನ್ನ ಮೇಲೆ ಯಾರದ್ದೋ ಕೈಯಲ್ಲಿ ಈ ರೀತಿ ಮಾಡಿಸುತ್ತಿರಬಹುದು, ಅಷ್ಟೇ. ನಾನು ಯಾಕೆ ಅದಕ್ಕೆ ಹೋಗಲಿ’ ಎಂದು ಹೇಳಿದರು.