ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಯಲ್ಲಿ ನಡೆದಿದ್ದ ಎಸ್‌ಐಟಿ ಶೋಧದ ವೇಳೆ ಬಂದೂಕು ಹಾಗೂ ಮಾರಕಾಯುಧ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ತಿಮರೋಡಿ ಅವರ ಮನೆಗೆ ಪೊಲೀಸರು ಶುಕ್ರವಾರ ನೊಟೀಸ್ ಅಂಟಿಸಿದ್ದಾರೆ.
ಬುಧವಾರ ಉಜಿರೆಯಲ್ಲಿರುವ ತಿಮರೋಡಿ ಅವರ ಮನೆಗೆ ಮಹಜರು ನಡೆಸಲು ಬೆಳ್ತಂಗಡಿ ಪೊಲೀಸರು ತೆರಳಿದ್ದು, ಈ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಅವರು ಮನೆಯಲ್ಲಿರಲಿಲ್ಲ. ಬಳಿಕ ಗುರುವಾರ ಪೊಲೀಸರು ಮತ್ತೆ ಅಲ್ಲಿಗೆ ತೆರಳಿದ್ದ ಸಂದರ್ಭವೂ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಯಾರೂ ಇರಲಿಲ್ಲವಾದ ಹಿನ್ನಲೆಯಲ್ಲಿ ಸೆ.21ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿ ಪೊಲೀಸರು ಮನೆಯ ಗೋಡೆಗೆ ನೊಟೀಸ್ ಹಚ್ಚಿಬಂದಿದ್ದಾರೆ.
ಮನೆಯಲ್ಲಿ ಶಸ್ತ್ರಾಸ್ತ್ರ ಪತ್ತೆ: ಮಹೇಶ್ ಶೆಟ್ಟಿ ತಿಮರೋಡಿ ಮನೆ ಬಾಗಿಲಿಗೆ ನೊಟೀಸ್!
