ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆ ಆರತಕ್ಷತೆ ಮುಗಿಸಿ ವಾಪಸ್ಸಾಗುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಪರಿಣಾಮ ಸುಮಾರು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೋಲಾರದ ಸುಗಟೂರು ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಗಾಯಗೊಂಡವರಲ್ಲಿ 15 ಮಹಿಳೆಯರು ಸೇರಿದ್ದಾರೆ ಮತ್ತು ಹತ್ತು ಜನರ ಸ್ಥಿತಿ ಗಂಭೀರವಾಗಿದೆ.
ಕೋಲಾರದ ವಧು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ವರನ ಮದುವೆ ಆರತಕ್ಷತೆ ರತ್ನ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು. ಆರತಕ್ಷತೆ ಮುಗಿಸಿಕೊಂಡು ಮೂರು ಖಾಸಗಿ ಬಸ್‌ಗಳಲ್ಲಿ ಜನರು ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿತು. ಬಸ್‌ನಲ್ಲಿ ಸುಮಾರು 55 ಮಂದಿ ಇದ್ದರು. ಅಪಘಾತದಿಂದ ಬಸ್ ಕಾಲುವೆಗೆ ಉರುಳಿದಿದ್ದು, ಬಸ್‌ನಲ್ಲಿದ್ದವರು ಬಹುತೇಕರು ನೀರಿಗೆ ಬಿದ್ದಿದ್ದಾರೆ.
ಸ್ಥಳೀಯರು ಹಾಗೂ ಬಸ್‌ನಲ್ಲಿ ಇದ್ದವರು ತಕ್ಷಣ ಗಾಯಾಳುಗಳನ್ನು ಕೋಲಾರ ಜಿಲ್ಲಾಸ್ಪತ್ರೆಗೆ ಕರೆದೊಯ್ಯುದಿದ್ದಾರೆ. ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.