ಹೊಸದಿಗಂತ ಡಿಜಿಟಲ್ ಡೆಸ್ಕ್:
ದುಡ್ಡು ಏನ್ ಮೊಟ್ಟೆಯಿಡುತ್ತಾ? ದುಡ್ಡು ಇಲ್ವೇನ್ರಿ ನಿಮ್ ಹತ್ರ? ಏನು ಅರಣ್ಯ ಇಲಾಖೆ ಬಡ ಇಲಾಖೆನಾ? ಹೀಗಂತ ಸಿಎಂ ಸಿದ್ದರಾಮಯ್ಯ , ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರಿಗೆ ಪ್ರಶ್ನೆ ಮಾಡಿದದ್ದಾರೆ.
ʻರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ-2025ʼ ಹುತಾತ್ಮರ ದಿನಾಚರಣೆಯ ಕಾರ್ಯಕ್ರಮದ ವೇದಿಕೆಯಲ್ಲೇ ಸಿಎಂ ಈ ರೀತಿ ಪ್ರಶ್ನೆ ಮಾಡಿದ್ದಾರೆ. ಆನೆ ಹಾವಳಿ ಹೆಚ್ಚಾಗಿರುವ ಬಗ್ಗೆ ಮಾತಾನಾಡಿದ ಸಿಎಂ, ರೈಲ್ವೇ ಬ್ಯಾರಿಕೇಡ್ ವ್ಯವಸ್ಥೆಗೆ ಸೂಚಿಸಿದ್ರು. ಈ ವೇಳೆ 410 ಕಿಮಿ ಆಗಿದೆ ಇನ್ನು 500 ಕಿಮಿ ಮಾಡಬೇಕು ಅಂತಾ ಖಂಡ್ರೆ ಹೇಳಿದ್ದು. ಅದಕ್ಕೆ ಸಿಎಂ ಸಿದ್ದು ಪ್ರತಿಕ್ರಿಯೆ ನೀಡಿದ್ದು, ಮಾಡಿ ದುಡ್ ಇಲ್ವಾ ನಿಮ್ ಇಲಾಖೆನಲ್ಲಿ? ಇದನ್ನೇ ಹೇಳ್ಕೊಂಡು ಕೂರೋದಲ್ಲ. ನಿಮ್ದು ಬಡ ಇಲಾಖೆ ಏನು ಅಲ್ವಲ್ಲ? ಅಂತಾ ಟಾಂಗ್ ಕೊಟ್ಟಿದ್ದಾರೆ.