ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹು ನಿರೀಕ್ಷಿತ ಕಾಂತಾರ ಚಿತ್ರ ನಾಳೆ ಬಿಡುಗಡೆಯಾಗಲಿದೆ. ಬಿಡುಗಡೆಯಾಗುವ ಸಂದರ್ಭದಲ್ಲಿ ಕಾಂತಾರದ ನಂತರ ವಾಟ್ ನೆಕ್ಸ್ಟ್ ಎಂಬ ಪ್ರಶ್ನೆಗೆ ರಿಷಭ್ ಶೆಟ್ಟಿ ಮುಂದೆ ʼರೆಸ್ಟ್ʼ ಎಂದು ಉತ್ತರಿಸಿದ್ದಾರೆ.
ಈ ಪ್ರಶ್ನೆಗೆ ಉತ್ತರ ಮುಂದೆ ವಿಶ್ರಾಂತಿ ಪಡೆಯುವುದು. ಚಿತ್ರಕ್ಕೆ ಬಹಳ ಶ್ರಮ ಹಾಕಿದ್ದೇವೆ. ನಮ್ಮ ತಂಡಕ್ಕೆ ಇದು ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಬಿಡುಗಡೆಯ ದಿನಾಂಕ ಪ್ರಕಟ ಮಾಡಿದ್ದರಿಂದ ಆ ದಿನದ ಒಳಗಡೆ ಮುಗಿಸಲೇಬೇಕಾದ ಒತ್ತಡವಿತ್ತು. ಹೀಗಾಗಿ ಮುಂದೆ ವಿಶ್ರಾಂತಿ ಪಡೆಯುವುದು ನನ್ನ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ.