Sunday, January 11, 2026

ಸಿಲಿಕಾನ್ ಸಿಟಿಯಲ್ಲಿ ಮಹಿಳಾ ಸುರಕ್ಷತೆ ಎಲ್ಲಿದೆ? ಒಂಟಿ ಯುವತಿಯ ಮೇಲೆ ಡೆಲಿವರಿ ಬಾಯ್ ಅಟ್ಯಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಗರದ ಕೊತ್ತನೂರಿನ ವಿಧಾನಸೌಧ ಲೇಔಟ್‌ನಲ್ಲಿ ರಕ್ಷಣೆ ಇಲ್ಲದಂತಾಗಿದ್ದು, ಡೆಲಿವರಿ ಬಾಯ್ ಒಬ್ಬ ಯುವತಿಯ ಮೇಲೆ ಅಸಭ್ಯವಾಗಿ ವರ್ತಿಸಿ, ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಯುವತಿಯು ತನ್ನ ಮನೆಯ ಮುಂದೆ ಬಿದ್ದಿದ್ದ ಬಾಕ್ಸ್‌ ಅನ್ನು ತೆಗೆದುಕೊಂಡು ಒಳಗೆ ಹೋಗುತ್ತಿದ್ದಾಗ, ಅಲ್ಲಿಗೆ ಬಂದ ಡೆಲಿವರಿ ಬಾಯ್ ಮೊದಲಿಗೆ ತನ್ನ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಆಕೆಯನ್ನು ಅಸಭ್ಯವಾಗಿ ಕರೆದು ವಿಕೃತಿ ಮೆರೆದಿದ್ದಾನೆ. ಯುವತಿ ಭಯಗೊಂಡು ಅಲ್ಲಿಂದ ಹೊರಟಾಗ, ಹಿಂದಿನಿಂದ ಬಂದು ಆಕೆಯನ್ನು ಬಲವಂತವಾಗಿ ತಬ್ಬಿಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಕಾಮುಕನ ಹಿಡಿತದಿಂದ ತಪ್ಪಿಸಿಕೊಳ್ಳಲು ಯುವತಿ ಹೋರಾಡಿದಾಗ, ರೊಚ್ಚಿಗೆದ್ದ ಆರೋಪಿ ಆಕೆಯ ಕೆನ್ನೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಕಂಗೆಟ್ಟ ಯುವತಿ ಜೋರಾಗಿ ಕಿರುಚಾಡಲು ಪ್ರಾರಂಭಿಸಿದಾಗ, ಸ್ಥಳೀಯರು ಬರುತ್ತಾರೆಂಬ ಭಯದಿಂದ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಘಟನೆಯಿಂದ ಆಘಾತಕ್ಕೊಳಗಾದ ಯುವತಿ ತಕ್ಷಣವೇ ಕೊತ್ತನೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸದ್ಯ ತಲೆಮರೆಸಿಕೊಂಡಿರುವ ಆ ಡೆಲಿವರಿ ಬಾಯ್ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

error: Content is protected !!