Friday, September 12, 2025

ವೈಟ್‌ ಟಾಪಿಂಗ್‌:  23 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಾಜ್‌ಕುಮಾರ್ ರೋಡ್‌ ಬಂದ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೆಜೆಸ್ಟಿಕ್‌ನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಕೆಎಸ್ಆರ್‌ಟಿಸಿ, ಬಿಎಂಟಿಸಿ, ಖಾಸಗಿ ಬಸ್‌ಗಳು ತೆರಳಬೇಕು ಅಂದರೆ ರಾಜ್‌ಕುಮಾರ್ ರಸ್ತೆ ಮುಖಾಂತರ ಹೋಗಬೇಕು. ಈ ರಸ್ತೆಯಿಂದ ತುಮಕೂರು ರಸ್ತೆಗೆ ಕನೆಕ್ಟ್ ಆಗಿ ತೆರಳಬಹುದಿತ್ತು‌. ಆದರೆ ರಾಜ್‌ಕುಮಾರ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಇದರಿಂದ ಸಂಚಾರ ನಿರ್ಬಂಧ ಮಾಡಲಾಗಿದೆ.

ಮೆಜೆಸ್ಟಿಕ್‌ನಿಂದ ಲೂಲುಮಾಲ್ ಜಂಕ್ಷನ್ ಮಾರ್ಗವಾಗಿ ನವರಂಗ್ ಸಿಗ್ನಲ್‌ಗೆ ಬರಲು ದ್ವಿಚಕ್ರ ವಾಹನ, ಕಾರುಗಳ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಬಸ್‌ಗಳು ಲೂಲುಮಾಲ್ ಜಂಕ್ಷನ್ ಬಳಿ ಇರುವ ಅಂಡರ್‌‌ ಪಾಸ್ ಮುಖಾಂತರ ಬಾಷಂ ಸರ್ಕಲ್‌ಗೆ ತೆರಳಿ ವೆಸ್ಟಾಫ್ ಕಾರ್ಡ್ ರೋಡ್ ಮೂಲಕ ತುಮಕೂರು ರಸ್ತೆಗೆ ತೆರಳುಬಹುದು.

ವಾಹನ ಸವಾರರಿಗೆ ಬದಲಿ ಮಾರ್ಗ ತಿಳಿಯದೇ ಲೂಲು ಜಂಕ್ಷನ್ ಬಳಿ ಸಂಚಾರ ದಟ್ಟಣೆ ಸೃಷ್ಟಿಯಾಗುತ್ತಿದೆ. ಇದರಿಂದಾಗಿ ಟ್ರಾಫಿಕ್ ಪೊಲೀಸರು ವಾಹಗಳನ್ನು ಖುದ್ದು ಸ್ಥಳದಲ್ಲಿ ನಿಂತು ಮಾರ್ಗ ಬದಲಾವಣೆ ಮಾಡುತ್ತಿದ್ದಾರೆ. ಮೆಜೆಸ್ಟಿಕ್‌ನಿಂದ ತುಮಕೂರು ಕಡೆಗೆ ಮತ್ತು ರಾಜಾಜಿನಗರದ ಕಡೆಗೆ ಬರುವ ವಾಹನಗಳಿಗೆ ಟ್ರಾಫಿಕ್ ಪೊಲೀಸರು ಬದಲಿ ಮಾರ್ಗ ಸೂಚಿಸಿದ್ದಾರೆ. 

ಇದನ್ನೂ ಓದಿ