ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಣ್ಣೆ ಹಚ್ಚಿಲ್ಲವೆಂದು ಶಿಕ್ಷಕರೊಬ್ಬರು ವಿದ್ಯಾರ್ಥಿನಿಯ ಕೂದಲನ್ನು ಬ್ಲೇಡ್‌ನಿಂದ ಕತ್ತರಿಸಿದ್ದಾರೆ. ಈ ಕಾರಣದಿಂದ ಅವರ ಕೆಲಸ ಹೋಗಿದೆ.
ಗುಜರಾತ್ನ ಜಾಮ್‌ನಗರದ ಸ್ವಾಮಿನಾರಾಯಣ ಗುರುಕುಲ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕರು ವಿದ್ಯಾರ್ಥಿನಿಯ ಕೂದಲನ್ನು ಬ್ಲೇಡ್‌ನಿಂದ ಕತ್ತರಿಸಿದ್ದಾರೆ. ವಿದ್ಯಾರ್ಥಿನಿ ಕೂದಲಿಗೆ ಎಣ್ಣೆ ಹಚ್ಚಿಕೊಂಡಿರಲಿಲ್ಲ ಎನ್ನುವ ಕಾರಣ ನೀಡಲಾಗಿದೆ.
ಆಕೆಯ ಪೋಷಕರು ಜಿಲ್ಲಾ ಶಿಕ್ಷಣ ಅಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ವಿದ್ಯಾರ್ಥಿನಿಯ ತಾಯಿ ಅಂಜಲಿಬೆನ್ ಗಂಧಾ ಶಿಕ್ಷೆಯ ರೀತಿಯನ್ನು ಟೀಕಿಸಿದ್ದಾರೆ, ಶಾಲೆಯಲ್ಲಿ ಮಕ್ಕಳನ್ನು ಹೆಚ್ಚಾಗಿ ಸಣ್ಣ ವಿಷಯಗಳಿಗೆ ಶಿಕ್ಷಿಸಲಾಗುತ್ತದೆ. ಒಂದು ಮಗು ಪುಸ್ತಕವನ್ನು ಮರೆತರೂ ಸಹ, ಅದಕ್ಕೆ 100 ಸಿಟ್-ಅಪ್‌ಗಳಿಂದ ಶಿಕ್ಷೆ ವಿಧಿಸಲಾಗುತ್ತದೆ. ನಮ್ಮ ಮಕ್ಕಳು ಶಾಲೆ ಎಂದರೆ ಹೆದರುವಷ್ಟು ಭಯಪಡುತ್ತಾರೆ ಎಂದು ಅವರು ಹೇಳಿದರು.
ಮಕ್ಕಳನ್ನು ತಿದ್ದಿ, ಬುದ್ಧಿ ಹೇಳುವ ಶಿಕ್ಷಕರೇ ಇಷ್ಟು ಕಠಿಣವಾಗಿ ವರ್ತಿಸಿದರೆ ಮಕ್ಕಳು ಶಾಲೆಗೆ ಬರಲು ಹೆದರುತ್ತಾರೆ ಎಂದು ಪೋಷಕರು ಹೇಳಿದ್ದಾರೆ.