ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಕಟ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಲ್ ತಮ್ಮ ಪುಟಾಣಿ ಕಂದನಿಗೆ ವಿಹಾನ್ ಎಂದು ಹೆಸರಿಟ್ಟಿದ್ದಾರೆ. ನಿನ್ನೆ ದಂಪತಿ ಮಗುವಿಗೆ ಹೆಸರಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದರು. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಮಗುವಿನ ಹೆಸರಿನ ಬಗ್ಗೆ ಚರ್ಚೆ ಆಗ್ತಿದೆ.
ಉರಿ ಸಿನಿಮಾ ಜೊತೆ ಮಗುವಿನ ಹೆಸರಿಗೆ ಕನೆಕ್ಷನ್ ಮಾಡಲಾಗಿದೆ. ಉರಿ ಸಿನಿಮಾ ವಿಕ್ಕಿ ಕೌಶಲ್‌ಗೆ ಬಿಗ್ ಬ್ರೇಕ್ ಸಿಕ್ಕಿತ್ತು. ಸಿನಿಮಾದಲ್ಲಿ ವಿಕ್ಕಿ ವಿಹಾನ್ ಸಿಂಗ್ ಶೇರ್‌ಗಿಲ್ ಪಾತ್ರದಲ್ಲಿ ನಟನೆ ಮಾಡಿದ್ದರು. ಇನ್ನು ಉರಿ ಸಿನಿಮಾಗೆ ಏಳು ವರ್ಷ ಪೂರೈಕೆಯಾಗಿದೆ. ಏಳನೇ ತಾರೀಖೇ ಮಗುವಿಗೆ ನಾಮಕರಣವನ್ನೂ ಮಾಡಲಾಗಿದೆ.
ಇನ್ನು ಕಟ್ರೀನಾ ಹಾಗೂ ವಿಕ್ಕಿ ಹೆಸರಿನ ಅಕ್ಷರಗಳು ಕೂಡ ವಿಹಾನ್‌ನಲ್ಲಿದೆ. ವಿಹಾನ್ ಅಂದ್ರೆ ಬೆಳಕಿನ ಕಿರಣಗಳು ಎಂದರ್ಥ.
CINE | ವಿಕ್ಕಿ ಕೌಶಲ್- ಕಟ್ರೀನಾ ಪುತ್ರನಿಗೆ ʼವಿಹಾನ್ʼ ಎಂದೇ ಹೆಸರಿಟ್ಟಿದ್ಯಾಕೆ? ಉರಿ ಸಿನಿಮಾ ಜತೆ ಕನೆಕ್ಷನ್?

