ಕಾಡುಕೋಣ ದಾಳಿ: ಯುವಕ ಬಲಿ, ಮುಗಿಲುಮುಟ್ಟಿದ ತಾಯಿಯ ಆಕ್ರಂದನ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಲೆನಾಡು ಭಾಗದಲ್ಲಿ ಮತ್ತೆ ಕಾಡುಜೀವಿಗಳ ಹಾವಳಿ ಹೆಚ್ಚುತ್ತಿದ್ದು, ಈ ನಡುವೆ ಕಾಡುಕೋಣದ ದಾಳಿಯಿಂದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಕಳಸ ತಾಲೂಕಿನ ಮೈದಾಡಿಯ ಯಮಗೊಂಡ ಎಸ್ಟೇಟ್‌ನಲ್ಲಿ ಈ ದಾರುಣ ಘಟನೆ ನಡೆದಿದೆ. ಮೃತರನ್ನು ಚೇತನ್ (30) ಎಂದು ಗುರುತಿಸಲಾಗಿದೆ. ಕಾಡುಕೋಣ ದಾಳಿ ವೇಳೆ ಅದರ ಕೊಂಬು ಚೇತನ್ ಅವರ ಎದೆಗೆ ತೀವ್ರವಾಗಿ ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಕಳಸ ಆಸ್ಪತ್ರೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಇದನ್ನೂ ಓದಿ: … Continue reading ಕಾಡುಕೋಣ ದಾಳಿ: ಯುವಕ ಬಲಿ, ಮುಗಿಲುಮುಟ್ಟಿದ ತಾಯಿಯ ಆಕ್ರಂದನ
Copy and paste this URL into your WordPress site to embed
Copy and paste this code into your site to embed