Tuesday, October 28, 2025

ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಡಿಸಿಎಂ ಪುತ್ರ? ಡಿಕೆಶಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಪುತ್ರನ ರಾಜಕೀಯ ಪ್ರವೇಶದ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.

ತಮ್ಮ ಮೇಲೆ ಮಾಡಿರುವ ಹಲವು ಆರೋಪಗಳು ಹಾಗೂ ನನಗೆ ನೀಡಿದ ನಿರಂತರ ಕಾನೂನು ನೋಟಿಸ್‌ಗಳು ಮತ್ತು ನ್ಯಾಯಾಲಯದ ಹೋರಾಟಗಳಿಂದಾಗಿ ನನ್ನ ಪುತ್ರ ರಾಜಕೀಯಕ್ಕೆ ಬರುವುದು ಬೇಡ, ಬದಲಿಗೆ ಅವನು ವಕೀಲನಾಗಬೇಕು ಎಂದು ಹೇಳಿದ್ದಾರೆ.

ಈ ಹಿಂದೆಯೂ ಡಿಕೆ ಶಿವಕುಮಾರ್​​ ಅವರು ನನ್ನ ಮಗ ವಕೀಲನಾಗಿ, ನನ್ನ ಮೇಲೆ ಮಾಡಿರುವ ಆರೋಪಗಳಿಗೆ ಅವನು ಕಾನೂನು ಪ್ರಕಾರ ಉತ್ತರ ನೀಡಬೇಕು ಎಂದು ಹೇಳಿದ್ದರು. ಇದೀಗ ಅವರ ಪುತ್ರ ರಾಮಯ್ಯ ಕಾಲೇಜಿನಲ್ಲಿ ಕಾನೂನು ಪದವಿಯ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನನಗೆ ಪ್ರತಿದಿನ ನೋಟಿಸ್‌ಗಳು ಬರುತ್ತವೆ, ಸಾಯುವವರೆಗೂ ಅವು ನನ್ನನ್ನು ಬಿಡುವುದಿಲ್ಲ. ಹಾಗಾಗಿ ನೀನು ಲಾಯರ್ ಆಗು ಎಂದು ಪುತ್ರನಿಗೆ ಕಿವಿ ಮಾತು ಹೇಳಿದ್ದೇನೆ.

ಅಧಿಕಾರವು ಸ್ನೇಹಿತರನ್ನು, ಶತ್ರುಗಳನ್ನು ಸೃಷ್ಟಿಸುತ್ತದೆ ಹಾಗೂ ಜನರಿಗೆ ಸಹಾಯ ಮಾಡಲು ಅಥವಾ ತೊಂದರೆ ನೀಡಲು ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ, ನನ್ನ ಪುತ್ರ ಕಾನೂನು ಕ್ಷೇತ್ರದಲ್ಲಿ ಕೆಲಸ ಮಾಡಲಿ ಎಂದು ಶಿವಕುಮಾರ್ ಹೇಳಿದ್ದಾರೆ. ಇನ್ನು ಈ ವೇಳೆ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ನನಗೆ ಪದವಿ ಮುಗಿಸಲು ಅವಕಾಶ ಸಿಗಲಿಲ್ಲ, 2007-08ರಲ್ಲಿ ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ರೋಹಿತ್ ಕುಮಾರ್ ಅವರ ಕಾನೂನು ಹೋರಾಟ ಮತ್ತು ರಾಜ್ಯಕ್ಕೆ ಒಳ್ಳೆಯ ಹೆಸರು ತಂದಿರುವುದನ್ನು ಶ್ಲಾಘಿಸಿದರು.

error: Content is protected !!