Monday, October 27, 2025

ಡಿ. 8ಕ್ಕೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ, ಮುಂದಿನ ವಾರ ಸಭೆ: ಹೊರಟ್ಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಿ. 8ಕ್ಕೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಫಿಕ್ಸ್​​ ಮಾಡಲಾಗಿದೆ. ಈ ಕುರಿತು ಮುಂದಿನ ವಾರ ಬೆಳಗಾವಿ ಡಿಸಿಯೊಂದಿಗೆ ಸಭೆ ಮಾಡುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಈ ಕುರಿತು ಮಾತನಾಡಿದ ಅವರು, ಸಿಎಂ ಜೊತೆ ಚರ್ಚೆ ಮಾಡಿದ್ದೇನೆ ಅವರು ಒಪ್ಪಿಕೊಂಡಿದ್ದಾರೆ. ಶಾಸಕರುಗಳಿಗೆ ಯಾವುದೇ ಸೀರಿಯಸ್​ನೆಸ್​​​ ಇಲ್ಲ, ಉತ್ತರ ಕರ್ನಾಟಕದ ಶಾಸಕರು ಅಭಿವೃದ್ಧಿ ಬಗ್ಗೆ ಮಾತನಾಡೋದಿಲ್ಲ, ದಕ್ಷಿಣ ಕರ್ನಾಟಕದವರು ಮಾತನಾಡುತ್ತಾರೆ. ಪ್ರತಿ ಬುಧವಾರ ಮತ್ತು ಗುರುವಾರ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತನಾಡಲು ಸಮಯ ಫಿಕ್ಸ್ ಮಾಡಲಾಗಿದೆ ಎಂದರು.

ಯಾವೊಬ್ಬ ಶಾಸಕರು ಉತ್ತರ ಕರ್ನಾಟಕದ ಬಗ್ಗೆ ಮಾತನಾಡಲ್ಲ, ನಾನು ಶಾಸಕರುಗಳಿಗೆ ಎರಡು ದಿನದಲ್ಲಿ ಸರ್ಕ್ಯೂಲರ್​ ಕಳಿಹಿಸುತ್ತೇನೆ. ಈ ಬಾರಿ ಉತ್ತರ ಕರ್ನಾಟಕದ ಚರ್ಚೆ ಬಗ್ಗೆ ನಿರ್ಲಕ್ಷ್ಯ ಆಗದಂತೆ ನೋಡಿಕೊಳ್ಳುತ್ತೇನೆ. ಶಾಸಕರಿಗೆ ರೈಟಿಂಗ್​ನಲ್ಲಿ ಬರೆದು ಕಳಿಸುತ್ತೇನೆ. ಬಳಿಕ ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತೇನೆ. ವಿಧಾನ ಪರಿಷತ್​ ಸದಸ್ಯರುಗಳಿಗೆ ರೈಟಿಂಗ್​ನಲ್ಲಿ ಬರೆದು ಕೊಡುವೆ ಎಂದು ಮಾಹಿತಿ ನೀಡಿದರು.

error: Content is protected !!