Monday, January 12, 2026

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್‌: ಭಾರತದ ಮೊದಲ ಸೀಸನ್ ಗೆ ದಿಗ್ಗಜ ಬ್ರ್ಯಾಂಡ್‌ಗಳ ಬೆಂಬಲ!

ಹೊಸದಿಗಂತ ವರದಿ ಬೆಂಗಳೂರು:

ವರ್ಲ್ಡ್ ಟೆನಿಸ್ ಲೀಗ್ (WTL) ತನ್ನ ಮೊದಲ ಭಾರತ ಸೀಸನ್‌ಗೆ ಭರ್ಜರಿ ಆರಂಭ ನೀಡಲು ಸಜ್ಜಾಗಿದೆ.
ಐಕಾನಿಕ್ ಸ್ಪೋರ್ಟ್ಸ್ & ಇವೆಂಟ್ಸ್ ಲಿಮಿಟೆಡ್ WTL ನ ಟೈಟಲ್ ಪಾಲುದಾರರಾಗಿ ಸೇರಿಕೊಂಡಿದ್ದು, ಜಾಗತಿಕ ಕ್ರೀಡಾ ಶ್ರೇಷ್ಟತೆ ಮತ್ತು ವಿಶ್ವಪ್ರಸಿದ್ಧ ತಾರೆಯರನ್ನು ಭಾರತಕ್ಕೆ ತರಲು ಕೈಜೋಡಿಸಿದೆ. ಅವರ ಜೊತೆ ಸ್ಪೈಸ್‌ಜೆಟ್ ಪವರ್ಡ್ ಬೈ ಪಾಲುದಾರರಾಗಿ ಸೇರಿದೆ.

ಈ ಆವೃತ್ತಿಗೆ EaseMyTrip ಪ್ರಯಾಣ ಪಾಲುದಾರರಾಗಿ, ಬಿಸ್ಲೆರಿ ಹೈಡ್ರೇಶನ್ ಪಾಲುದಾರರಾಗಿ, ಕೋರಂ ಇಂಡಿಯಾ ಅಧಿಕೃತ ಸಮಯಪಾಲಕರಾಗಿ ಮತ್ತು ಡನ್‌ಲಾಪ್ ಬಾಲ್ ಪಾಲುದಾರರಾಗಿ ಒಡಂಬಡಿಕೆ ಮಾಡಿಕೊಂಡಿವೆ. ಆಟಗಾರರು ಮತ್ತು ಸಿಬ್ಬಂದಿಯ ಆರೋಗ್ಯವನ್ನು ಅಪೂರ್ವ ಹೆಲ್ತ್‌ಕೇರ್ ವೈದ್ಯಕೀಯ ಪಾಲುದಾರರಾಗಿ ನೋಡಿಕೊಳ್ಳಲಿದೆ. ಜಾಗತಿಕ ಅಭಿಮಾನಿಗಳು ನಿರ್ವಿಘ್ನ ಪ್ರಸಾರ ಅನುಭವಿಸಲು ACT ಫೈಬರ್‌ನೆಟ್ ಸಂಪರ್ಕ ಪಾಲುದಾರರಾಗಿ ಜೊತೆಗಿದೆ.

RED FM ರೇಡಿಯೋ ಪಾಲುದಾರರಾಗಿ ಬೆಂಗಳೂರಿನಷ್ಟೆಲ್ಲ ಸ್ಪರ್ಧೆಯ ಸಂಭ್ರಮವನ್ನು ತಲುಪಿಸಲಿದೆ. ಬುಕ್‌ಮೈಶೋ ಟಿಕೆಟ್ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದು, ವೀಕ್ಷಕರಿಗೆ ಸುಗಮ ಅನುಭವ ನೀಡಲಿದೆ. XRT ಆಕ್ಟಿವ್ ಅಪರೇಲ್ ಪಾಲುದಾರರಾಗಿ ಬಾಲ್ ಕಿಡ್ಸ್ ಮತ್ತು ಅಂಪೈರ್‌ಗಳ ವೇಷಭೂಷಣ ಒದಗಿಸುವುದು; ಡಾ. ಉಮೇದ್ ಕಾಸ್ಮೆಟಿಕ್ಸ್ ಅಸ್ಥೆಟಿಕ್ಸ್ ಪಾಲುದಾರರಾಗಿ ಸೇರಿದೆ. ಜೊತೆಗೆ EnchantXP ಎಕ್ಸ್‌ಪೀರಿಯನ್ಸ್ ಪಾಲುದಾರರಾಗಿ ಕಾರ್ಯಕ್ರಮದ ಅನುಭವವನ್ನು ಮತ್ತಷ್ಟು ಹೆಚ್ಚಿಸಲಿದೆ.

ಈ ಕುರಿತಾಗಿ ವರ್ಲ್ಡ್ ಟೆನಿಸ್ ಲೀಗ್ ಸಹ-ಸ್ಥಾಪಕಿ ಹೇಮಾಲಿ ಶರ್ಮ ಹೇಳಿದರು: ಪ್ರತಿ ಸೀಸನ್‌ಗೂ ನಾವು ಹೊಸದನ್ನು ಪರಿಚಯಿಸುವ ಗುರಿ ಹೊಂದಿದ್ದೇವೆ. ಈ ಪಾಲುದಾರರ ಸೇರ್ಪಡೆ ನಮ್ಮ ಲೀಗ್‌ಗೆ ಮತ್ತಷ್ಟು ಬಲ ನೀಡಿದೆ ಎಂದರು. ವರ್ಲ್ಡ್ ಟೆನಿಸ್ ಲೀಗ್ ಈ ತಿಂಗಳು ಬೆಂಗಳೂರಿನ ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ನಡೆಯಲಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!