Tuesday, November 11, 2025

ಅಪಾಯ ಮಟ್ಟ ಮೀರಿದ ಯಮುನಾ ನದಿ: 10,000ಕ್ಕೂ ಅಧಿಕ ಮಂದಿ ಸ್ಥಳಾಂತರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಹಳೆಯ ರೈಲ್ವೆ ಸೇತುವೆಯಲ್ಲಿ ಯಮುನಾ ನೀರಿನ ಮಟ್ಟ 207.47 ಮೀಟರ್ ದಾಖಲಾಗಿದೆ. ಕಳೆದ ಎರಡು ಗಂಟೆಗಳಿಂದ ಮಟ್ಟ ಸ್ಥಿರವಾಗಿದ್ದು, ಇಂದು ಬೆಳಿಗ್ಗೆ 8 ಮತ್ತು 9 ಗಂಟೆಗೆ ಅಧಿಕ ಮಟ್ಟ ದಾಖಲಾಗಿದೆ.

ಎಡೆಬಿಡದೆ ಸುರಿಯುತ್ತಿರುವ ಮಳೆಯ ನಂತರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನಗರಕ್ಕೆ ಯಮುನಾ ನದಿಯ ಎಚ್ಚರಿಕೆ ಗುರುತು 204.5 ಮೀಟರ್ ಆಗಿದ್ದರೆ, ಅಪಾಯದ ಗುರುತು 205.33 ಮೀಟರ್ ಆಗಿದೆ. ಜನರನ್ನು ಸ್ಥಳಾಂತರಿಸುವ ಕಾರ್ಯ 206 ಮೀಟರ್‌ನಿಂದ ಪ್ರಾರಂಭವಾಗುತ್ತದೆ.

ಕಂದಾಯ ಇಲಾಖೆಯ ಪ್ರಕಾರ, 8,018 ಜನರನ್ನ ಡೇರೆಗಳಿಗೆ ಸ್ಥಳಾಂತರಿಸಲಾಗಿದ್ದು, 2,030 ಜನರನ್ನು 13 ಶಾಶ್ವತ ಆಶ್ರಯಗಳಿಗೆ ಸ್ಥಳಾಂತರಿಸಲಾಗಿದೆ. ಪರಿಸ್ಥಿತಿಯ ಬಗ್ಗೆ ದೆಹಲಿ ಸರ್ಕಾರ 24/7 ನಿಗಾ ಇಡುತ್ತಿದೆ.

error: Content is protected !!