Friday, January 2, 2026

ಬಳ್ಳಾರಿ ಗಲಾಟೆ ವಿಷಯವಾಗಿ ತನಿಖೆ ಮಾಡೋಕೆ ಹೇಳಿದಿನಿ: ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಳ್ಳಾರಿ ಗಲಾಟೆ ಸಂಬಂಧ ತನಿಖೆಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬಳ್ಳಾರಿ ಗಲಾಟೆ ವಿಚಾರವಾಗಿ ವಿಧಾನಸೌಧದಲ್ಲಿ ‌ಪ್ರತಿಕ್ರಿಯೆ ನೀಡಿದ ಅವರು, ಘಟನೆ ಬಗ್ಗೆ ತನಿಖೆ ಮಾಡೋದಕ್ಕೆ ಹೇಳಿದ್ದೇನೆ. ಯಾರ ಗನ್ ನಿಂದ ಬುಲೆಟ್ ಬಂದಿದೆ ಅನ್ನೋದು ಗೊತ್ತಾಗಬೇಕಲ್ವಾ? ಬಿಜೆಪಿಯವರ ಗನ್ನಾ? ಅಥವಾ ಕಾಂಗ್ರೆಸ್ ಅವರ ಗನ್‌ನಿಂದ ಬಂದಿದ್ಯಾ ಅನ್ನೋದು ಗೊತ್ತಾಗಬೇಕು. ಅದಕ್ಕೋಸ್ಕರ ತನಿಖೆ ಮಾಡಲು ಹೇಳಿದ್ದೇನೆ ಎಂದರು.

ಖಾಸಗಿ ಬುಲೆಟ್‌ನಿಂದ ಸಾವಾಗಿದೆ ಎಂಬ ಬಳ್ಳಾರಿ ಎಸ್ ಪಿ ಮಾಹಿತಿ ಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯೆ ‌ನೀಡಿದ ಅವರು, ಅವರ ಸೆಕ್ಯುರಿಟಿಗಾಗಿ ಗನ್ ಇಟ್ಟುಕೊಂಡಿದ್ದಾರೆ. ಏರ್ ನಲ್ಲಿ ಗನ್ ಫೈರ್ ಮಾಡಿದ್ದಾರೆ. ಅದಕ್ಕೆ ಫೈರಿಂಗ್ ಮಾಡಿರೋದು ಮನುಷ್ಯನಿಗೆ ತಗುಲಿದೆ. ರಾಜಶೇಖರ್ ಸತ್ತು ಹೋಗಿದ್ದಾರೆ. ಯಾರ ಗನ್ ನಿಂದ ಬಂದಿದೆ ಅನ್ನೋದು ಗೊತ್ತಾಗಬೇಕಲ್ವಾ. ಅದಕ್ಕೆ ತನಿಖೆ ಮಾಡಿ ವರದಿ ಕೊಡಿ ಎಂದು ಹೇಳಿದ್ದೇನೆ ಅಂತ ತಿಳಿಸಿದರು.

error: Content is protected !!