ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿರುವ ದಸರಾ ಗಜಪಡೆಯ ಅರಮನೆ ಶೆಡ್ಗೆ ರಾತ್ರಿ ಅಕ್ರಮವಾಗಿ ಪ್ರವೇಶ ಮಾಡಿ, ಆನೆಗಳೊಂದಿಗೆ ಹತ್ತಿರದಿಂದ ರೀಲ್ಸ್ ಮಾಡಿದ ಯುವತಿಗೆ ಅರಣ್ಯ ಇಲಾಖೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಈ ಯುವತಿಯೊಂದಿಗೆ ಆನೆ ನೋಡಲು ಬಂದ ಇತರ ಮೂರು ಜನ ಆನೆಯೊಂದಿಗೆ ರೀಲ್ಸ್ ಮಾಡಿದ ಸಂಬಂಧ ಮೂರು ಪ್ರಕರಣ ದಾಖಲು ಮಾಡಿಕೊಂಡಿರುವ ಅಧಿಕಾರಿಗಳು 3,000 ರೂಪಾಯಿ ದಂಡ ವಿಧಿಸಿದ್ದಾರೆ.
ಈ ಬಾರಿ ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿರುವ ದಸರಾ ಗಜಪಡೆ ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಸ್ಥಾನದ ಬಳಿ ವಾಸ್ತವ್ಯ ಹೂಡಿವೆ.
ದಿನಾಂಕ 18/09/2025 ರಂದು ಅಪರಿಚಿತ ಯುವತಿ ಅರಮನೆ ಆವರಣದ ಆನೆ ಕ್ಯಾಂಪ್ಗೆ ರಾತ್ರಿ ಪ್ರವೇಶ ಮಾಡಿ ಆನೆಗಳೊಂದಿಗೆ ವಿಡಿಯೋ ತೆಗೆದು, ರೀಲ್ಸ್ ಮಾಡುತ್ತಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಈ ಯುವತಿ ಯಾವುದೇ ಅನುಮತಿ ಪಡೆಯದೆ ರಾತ್ರಿ ವೇಳೆ ಈ ರೀತಿ ಆನೆಯೊಂದಿಗೆ ಫೋಟೋ ಮತ್ತು ವಿಡಿಯೋ ತೆಗೆದಿರುವುದರಿಂದಾಗಿ ಅರಣ್ಯ ಇಲಾಖೆಯು ನೋಟಿಸ್ ನೀಡಿದೆ.