Thursday, January 1, 2026

ನಮ್ಮ ಮೇಲೆ ಕೃಪೆ ತೋರಿ ರಾಯರೇ, ಕೆಲಸ ಕೊಡಿಸಿ ಎಂದು ಪತ್ರ ಬರೆದ ಯುವಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಆಡಳಿತ ಸುಧಾರಣೆ ಸೇರಿದಂತೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ನಿರುದ್ಯೋಗಿ ದೈಹಿಕ ಶಿಕ್ಷಕರ ಸಂಘ ರಾಯರಿಗೆ ಮನವಿ ಪತ್ರ ಸಲ್ಲಿಸಿದೆ.

ಸರ್ಕಾರ ಸಂಪೂರ್ಣ ಆಡಳಿತ ಸುಧಾರಣೆಯಲ್ಲಿ ವಿಫಲವಾಗಿದೆ. ಹಲವು ವರ್ಷಗಳಿಂದ ಯಾವುದೇ ನೇಮಕಾತಿ ಆಗಿಲ್ಲ. ಹಲವು ಹೋರಾಟ ಮಾಡಿದರೂ ಸಮಸ್ಯೆ ಬಗೆ ಹರಿದಿಲ್ಲ. ಹೀಗಾಗಿ ಖಾಲಿ ಇರುವ ಎಲ್ಲ ದೈಹಿಕ ಶಿಕ್ಷಕರ ಹುದ್ದೆಗಳನ್ನ ಭರ್ತಿ ಮಾಡಿಸುವಂತೆ ರಾಯರ ಮುಂದೆ ವಿಚಿತ್ರ ಬೇಡಿಕೆ ಇಡಲಾಗಿದೆ.

ಶ್ರೀ ಗುರು ರಾಘವೇಂದ್ರ ಸ್ವಾಮೀಜಿಗಳು ಭಕ್ತರ ಆರಾಧ್ಯ ದೈವ ಆದ ತಾವು ಕರ್ನಾಟಕ ರಾಜ್ಯದಲ್ಲಿ ಆಡಳಿತಮಟ್ಟ ಎಲ್ಲಿಗೆ ಬಂದು ತಲುಪಿದೆ ತಮಗೆ ತಿಳಿದಿದೆ ಇದನ್ನು ಬಗೆಹರಿಸಿ. ತಾವುಗಳು ರಾಜ್ಯದಲ್ಲಿ ಸುಮಾರು ವರ್ಷದಿಂದ ನೇಮಕಾತಿ ನಡೆದಿಲ್ಲ. ನಿರುದ್ಯೋಗಿಗಳು ಸುಮಾರು ಹೋರಾಟ ಮಾಡಿ ಬೇಸತ್ತು ಹೋಗಿದ್ದೇವೆ. ಇದಕ್ಕೆ ಬೇಗ ಕಡಿವಾಣ ಹಾಕಿ ತಮ್ಮ ದಿವ್ಯ ದೃಷ್ಟಿಯಿಂದ. ನಿರುದ್ಯೋಗ ಸಮಸ್ಯೆ ಹೋಗಲಾಡಿಸಿ ಉದ್ಯೋಗ ಭಾಗ್ಯ ದೊರಕಲಿ ದೇವ ಹಾಗೂ ನಾವು ದೈಹಿಕ ಶಿಕ್ಷಣ ಶಿಕ್ಷಕರು.

ನೇಮಕಾತಿ ನಡೆಯದೆ ಸುಮಾರು ದಶಮಾನ ಕಳೆದು ಹೋಗಿವೆ. ಮಕ್ಕಳು, ಆರೋಗ್ಯ ಸಮಸ್ಯೆ ಮತ್ತು ದೈಹಿಕ ಶಿಕ್ಷಣ ಪದವಿ ಪಡೆದು ನಿರುದ್ಯೋಗ ಸಮಸ್ಯೆಯಿಂದ ಸಂಸಾರಗಳು ಬೀದಿಗೆ ಬರುತ್ತಿವೆ. ಕಾರಣ ಕರ್ನಾಟಕ ಸರ್ಕಾರಕ್ಕೆ ಬುದ್ಧಿ ಕಲಿಸಿ, ಬೇಗ ನೇಮಕಾತಿ ಪ್ರಾರಂಭವಾಗಬೇಕೆಂದು ಭಕ್ತಿಪೂರಕ ಕೇಳಿಕೊಳ್ಳುತ್ತಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

error: Content is protected !!