ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸಂಬಂಧಿಸಿದ ಆದಾಯ ತೆರಿಗೆ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ನಟ ಯಶ್ ಅವರನ್ನು ಆದಾಯ ತೆರಿಗೆ ಕಾಯ್ದೆಯಡಿ ‘ಶೋಧಿತ ವ್ಯಕ್ತಿ’ ಎಂದು ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಏನಿದು ಪ್ರಕರಣ?
ಆದಾಯ ತೆರಿಗೆ ಇಲಾಖೆಯು ನಟ ಯಶ್ ಅವರ ನಿವಾಸದ ಮೇಲೆ ಶೋಧ ನಡೆಸಿತ್ತು. ಈ ಶೋಧದ ಸಮಯದಲ್ಲಿ ಇಲಾಖೆಯು ವಿವಿಧ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿತ್ತು ಮತ್ತು ನಿಯಮಾನುಸಾರ ‘ಪಂಚನಾಮ’ವನ್ನೂ ನಡೆಸಲಾಗಿತ್ತು.
ಈ ದಾಖಲೆಗಳು ಮತ್ತು ಪ್ರಕ್ರಿಯೆಯನ್ನು ಆಧರಿಸಿ, ಕರ್ನಾಟಕ ಹೈಕೋರ್ಟ್, ಶೋಧ ಪ್ರಕ್ರಿಯೆಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಯಶ್ ಅವರು ‘ಶೋಧಿತ ವ್ಯಕ್ತಿ’ ಎಂಬ ವ್ಯಾಖ್ಯಾನಕ್ಕೆ ಒಳಪಡುತ್ತಾರೆ ಎಂದು ಅಭಿಪ್ರಾಯಪಟ್ಟಿದೆ.
ಆದಾಯ ತೆರಿಗೆ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ನೀಡಿರುವ ಈ ಅಭಿಪ್ರಾಯವು, ತೆರಿಗೆ ಇಲಾಖೆಯು ನಡೆಸಿದ ಶೋಧ ಮತ್ತು ವಶಪಡಿಸಿಕೊಂಡ ದಾಖಲೆಗಳ ಸಿಂಧುತ್ವಕ್ಕೆ ಬಲ ತುಂಬಿದಂತಾಗಿದೆ.

