Tuesday, November 4, 2025

ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿಯ ಪಂಜಾಬಿ ಮಟರ್ ಪನ್ನೀರ್!

ಪಂಜಾಬಿ ಡಾಬಾಗಳಲ್ಲಿ ದೊರೆಯುವ ಮಟರ್ ಪನ್ನೀರ್ ಅನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು ಎಂಬುದು ಬಹುಮಂದಿ ಗೊತ್ತಿಲ್ಲ. ಅದರಲ್ಲೂ ಬಟಾಣಿ ಮತ್ತು ಪನ್ನೀರ್‌ ನಿಂದ ತಯಾರಾಗುವ ಮಟರ್ ಪನ್ನೀರ್ ಬಹುಜನಪ್ರಿಯ. ಮನೆಮಂದಿಯ ಬಾಯಲ್ಲಿ ನೀರು ತರಿಸುವ ಈ ಪಾಕವಿಧಾನ ಈಗ ನಿಮಗಾಗಿ…

ಬೇಕಾಗುವ ಸಾಮಗ್ರಿಗಳು:
ಪನ್ನೀರ್ – 250 ಗ್ರಾಂ
ಹಸಿ ಬಟಾಣಿ – 2 ಕಪ್
ತುಪ್ಪ – 4 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 3 ಚಮಚ
ಈರುಳ್ಳಿ – 1 ಕಪ್
ಟಮೋಟೊ – 2 ಕಪ್
ಅರಿಶಿಣ – 1 ಚಮಚ
ಖಾರದಪುಡಿ – 2 ಚಮಚ
ಗರಂ ಮಸಾಲಾ – ಅರ್ಧ ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಹಾಲಿನ ಕೆನೆ – 3 ಚಮಚ

ಮಾಡುವ ವಿಧಾನ:
ಮೊದಲು ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಕತ್ತರಿಸಿದ ಪನ್ನೀರ್ ತುಂಡುಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿದು ಪಕ್ಕಕ್ಕಿಡಿ. ಬಳಿಕ ಅದೇ ಬಾಣಲೆಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆಲವೇ ಕ್ಷಣ ಬೇಯಿಸಿ. ತಕ್ಷಣ ಈರುಳ್ಳಿ ಸೇರಿಸಿ ಬಾಡಿಸಿ, ನಂತರ ಟಮೋಟೊ ಹಾಕಿ ಚೆನ್ನಾಗಿ ಫ್ರೈ ಮಾಡಿ.

ಇದಕ್ಕೆ ಅರಿಶಿಣ, ಖಾರದಪುಡಿ ಹಾಗೂ ಗರಂ ಮಸಾಲಾ ಸೇರಿಸಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಿ. ಈ ಮಿಶ್ರಣದೊಳಗೆ ಬಟಾಣಿ ಹಾಕಿ 3 ನಿಮಿಷ ಬೇಯಿಸಿ. ಈಗ ಕರಿದ ಪನ್ನೀರ್ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಬಾಣಲೆಗೆ ಮುಚ್ಚಳ ಹಾಕಿ ಸುಮಾರು 10 ನಿಮಿಷದವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ.

ಕೊನೆಗೆ ಕೆಳಗಿಳಿಸಿ ಹಾಲಿನ ಕೆನೆ ಸೇರಿಸಿದರೆ ರೆಸ್ಟೋರೆಂಟ್ ಶೈಲಿಯ ಪಂಜಾಬಿ ಮಟರ್ ಪನ್ನೀರ್ ರೆಡಿ.

error: Content is protected !!