ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಮನೆ ಅಂದ್ರೆ ಅದು ಜಗಳ ಅನ್ನೋ ಕಾನ್ಸೆಪ್ಟ್ ಚಾಲ್ತಿಯಲ್ಲಿರೋದು ಗೊತ್ತಿರೋದೇ. ಇದೀಗ ಬಿಗ್‌ಬಾಸ್ ಸೀಸನ್ 12 ಪ್ರಾರಂಭವಾದ ಎರಡನೇ ದಿನವೇ ಭಾರಿ ಜಗಳ ನಡೆದಿದೆ.
ಜಂಟಿ, ಒಂಟಿ ಕಾನ್ಸೆಪ್ಟ್‌ನಲ್ಲಿರುವ ಸ್ಪರ್ಧಿಗಳ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಹೀಗಾಗಿ ಅಶ್ವಿನಿ ಗೌಡ ಜೊತೆ ಗಿಲ್ಲಿ ನಟ, ಕಾವ್ಯ ಶೈವ ಜೋಡಿಯ ಜಗಳ ಶುರುವಾಗಿದೆ.
ಒಂಟಿ ಸ್ಪರ್ಧಿಯಾಗಿ ಅಶ್ವಿನಿ ಗೌಡ ಆಟವಾಡುತ್ತಿದ್ದರೆ ಜಂಟಿಗಳಾಗಿ ಗಿಲ್ಲಿ ನಟ ಹಾಗೂ ಕಾವ್ಯ ಶೈವ ಸ್ಪರ್ಧೆಯ ಅಖಾಡದಲ್ಲಿದ್ದಾರೆ. ಬಿಗ್‌ಬಾಸ್ ಚಟುವಟಿಕೆ ಕೊಟ್ಟ ಅನುಸಾರ ಪ್ರಾರಂಭಿಕವಾಗಿ ಈ ಕಾನ್ಸೆಪ್ಟ್ ಜಾರಿಯಲ್ಲಿದೆ. ಒಂಟಿ ಸ್ಪರ್ಧಿ ತಂಡಗಳು ಅರಸರ ಸ್ಥಾನದಲ್ಲಿರುತ್ತಾರೆ. ಜಂಟಿಗಳು ಆಳಾಗಿ ಕೆಲಸ ಮಾಡಬೇಕಿದೆ. ಹೀಗೆ ಬಿಗ್‌ಬಾಸ್ ಮನೆಯ ಚಟುವಟಿಕೆ ನಡೆಯುವ ವೇಳೆ ಒಂಟಿ ತಂಡದ ಸದಸ್ಯೆ ಅಶ್ವಿನಿ ಗೌಡ ಜೊತೆ ಗಿಲ್ಲಿ ನಟ ಮಾತು ಕೇಳಲಿಲ್ಲ ಅನ್ನೋ ಕಾರಣಕ್ಕೆ ಜಗಳ ಶುರುವಾಗಿದೆ.
ಮಾತಿಗೆ ಮಾತು ಬೆಳೆದು ನೀನು ನಾನು ಎಂದು ಏಕವಚನ ಪ್ರಯೋಗ ಸರಿ ಇರಲ್ಲ ಎಂದು ಗಿಲ್ಲಿ ನಟನಿಗೆ ಅಶ್ವಿನಿ ಗೌಡ ಎಚ್ಚರಿಕೆ ಕೊಡುವಷ್ಟು ವಿಪರೀತಕ್ಕೆ ಹೋಗಿದೆ. ಗೌರವ ಕೊಟ್ಟು ಮಾತನಾಡಿ ಎಂದು ಗಿಲ್ಲಿ ನಟ ಹಾಗೂ ಕಾವ್ಯಾ ಅವರಿಗೆ ಅಶ್ವಿನಿ ಗೌಡ ಎಚ್ಚರಿಕೆ ಕೊಟ್ಟಿದ್ದಾರೆ. ಅಲ್ಲಿಗೆ ಮನೆಯಲ್ಲಿ ಎರಡನೇ ದಿನವೇ ಸಣ್ಣದೊಂದು ಕಿಡಿ ಹೊತ್ತಿದೆ. ಮುಂದೆ ಬೆಂಕಿ ಬಿರುಗಾಳಿ ಹೊತ್ತುವ ಸೂಚನೆ ಕಂಡುಬರುತ್ತಿದೆ.